ಮೈಸೂರು,ಅಕ್ಟೋಬರ್,27,2025 (www.justkannada.in): ದೀಪಾವಳಿ ಹಬ್ಬದ ಪ್ರಯುಕ್ತ ಬೆಟ್ಟದ ಪುರದ ಸಿಡಿಲು ಮಲ್ಲಿಕಾರ್ಜುನ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಕಸ ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ನೀರು, ಜೂಸ್ ,ಮಜ್ಜಿಗೆ, ಲಸ್ಸಿ ಕುಡಿದು ನೀರಿನ ಬಾಟಲ್, ಜೂಸ್ ಬಾಟಲ್, ಟೆಟ್ರಾ ಪ್ಯಾಕ್ ಗಳನ್ನು ಬೆಟ್ಟದ ಮೆಟ್ಟಿಲುಗಳ ಉದ್ದಕ್ಕೂ ಎಲ್ಲೆಂದರಲ್ಲಿ ಎಸೆದು ಬೆಟ್ಟವನ್ನು ಮಾಲಿನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಮೈಸೂರು ಜಿಲ್ಲಾ ತಂಡ ಮಲ್ಲಿಕಾರ್ಜುನ ಬೆಟ್ಟದ ತಳದಲ್ಲಿ ಜಮಾವಣೆಗೆಗೊಂಡು ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದರು.
ಈ ಸ್ವಚ್ಚತಾ ಕಾರ್ಯಕ್ಕೆ ಮೈಸೂರಿನ NIE ಕಾಲೇಜಿನ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದು, ಸ್ವಚ್ಚತಾ ಕಾರ್ಯಕ್ಕೆ ಆಗಮಿಸಿದ ಸ್ವಯಂ ಸೇವಕರಿಗೆ ಬೆಟ್ಟದಪುರ ಪಂಚಾಯತಿ ವತಿಯಿಂದ ಊಟ ತಿಂಡಿಯ ವ್ಯವಸ್ಥೆ ಮಾಡುವುದರ ಜೊತೆಗೆ ಶೇಖರಣೆ ಗೊಂಡ ಈ ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.
ಈ ಸ್ವಚ್ಚತಾ ಅಭಿಯಾನದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಂದ್ರಶೇಖರ್, ರಾಜ್ಯ ಸಹ ಸಂಚಾಲಕ ರಾಮನುಜಂ, ಪಿರಿಯಾಪಟ್ಟಣ ತಾಲೂಕು ಸಂಚಾಲಕ ಅಶ್ವತ್ಥ, ನಮೋ ಮಲ್ಲೇಶ್, ಪ್ರಶಾಂತ್, ರುದ್ರೇಶ್, ಚಂದನ್, ಸೂರಿ, ಪ್ರವೀಣ್, ಪ್ರಜ್ವಲ್, ಶಿವು,ಮದನ್, ಪವನ್, NIE ಕಾಲೇಜು ಸ್ಟೂಡೆಂಟ್ ವೆಲ್ ಫೇರ್ ಆಫಿಸರ್ ಪ್ರೊಫೆಸರ್ ಡಾ. ಶರತ್ ಚಂದ್ರ, ಹಾಗೂ NIE ಕಾಲೇಜು ವಿಧ್ಯಾರ್ಥಿಗಳಾ ಕಿರಣ್, ಆಕಾಂಕ್ಷಾ, ಕಾರ್ತಿಕ್, ವಿಕಾಸ್ ಯಾದವ್, ಕ್ರಿಸ್, ರೋಹನ್ ಸೇರಿದಂತೆ ಯುವಾ ಬ್ರಿಗೇಡ್ ನ 40 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.
Key words: Youth Brigade, cleanliness, Sidilu Mallikarjuna Hill







