ಮಾನವೀಯತೆ ನೆಲೆ, ವೈಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾಗು ಕೃತಿಗಳು ಜನಪ್ರಿಯಗೊಳ್ಳುತ್ತವೆ- ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್

ಬೆಂಗಳೂರು, ಅಕ್ಟೋಬರ್,25,2025 (www.justkannada.in):  ಯಾವುದೇ ಒಂದು ಕೃತಿ ಮಾನವೀಯತೆಯ ನೆಲೆ , ಜನಪರತೆ ಮತ್ತು ವೃಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾದರೆ ಅವು ಸಹಜವಾಗಿಯೇ ಜನಪ್ರಿಯಗೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಏರ್ಪಡಿಸಿದ್ದ ತುರುವನೂರು ಮಂಜುನಾಥ ಅವರ ಅಂತರ್ಮಿಡಿತ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಲಂಕೇಶ್ ಅವರ ಬರಹಗಳು ಸಾಮಾನ್ಯವಾಗಿ ಬಹುಮುಖ ವಿಚಾರಗಳ ಮತ್ತು ಜನರ ಅಶೋತ್ತರಗಳ ನಾಡಿಮಿಡಿತದ ಬರಹಗಳಾಗಿದ್ದವು ಹಾಗಾಗಿಯೇ ಅವರ ಕೃತಿಗಳು ಜನಪ್ರಿಯಗೊಂಡಿದ್ದವು. ಆ ನಿಟ್ಟಿನಲ್ಲಿ ತುರುವನೂರು ಮಂಜುನಾಥ ಅವರ ಲೇಖನಗಳು ವೈಚಾರಿಕ ನೆಲಘಟ್ಟಿನ ಮೇಲೆ ರಚಿತವಾಗಿವೆ ಎಂದು ಅಭಿಪ್ರಾಯ ಪಟ್ಟರು.

ಪತ್ರಿಕೆಯ ಸಂಪಾದಕರಾದವರಿಗೆ ಸಂಪಾದಕೀಯ ಬರಹಗಳು ಜನಮಿಡಿತದ ಮಿಡಿತವಾಗಿರಬೇಕು  ,ಅಗಾದಾಗ ಮಾತ್ರ ಯಶಸ್ವಿಯಾಗುತ್ತವೆ ಮಂಜುನಾಥ ಅವರ ಅಂತರ್ಮಿಡಿತ  ಬರಹಗಳಲ್ಲಿ ಬಹುತೇಕ ಓದುಗರ ಅಗತ್ಯತೆಗನುಗುಣವಾಗಿವೆ ಆದರೆ ಈಗ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ  ಎಂದರು.

ಸಂಪಾದಕರಾದವರಿಗೆ. ಖ್ಯಾತ ಬರಹಗಾರರ, ಬರಹಗಳ ಓದಿನ ಹಸಿವಿರಬೇಕು ಆ ಬರಹಗಳ ಓದಿನಿಂದಲೇ ತಮ್ಮ ಬರಹಗಳು   ಮತ್ತಷ್ಟು ಗಟ್ಟಿಯಾಗುತ್ತವೆ   ಎಂದ ಅವರು ಲಂಕೇಶ್ ಖ್ಯಾತ ಬರಹಗಾರರ ಓದಿನಿಂದಲೇ ಅವರ ಬರಹಗಳು ಜನಪ್ರಿಯಗೊಂಡಿದ್ದವು ಎಂದು ನುಡಿದರು.

ಅಂತರ್ಮಿಡಿತ ಕೈತಿಯ ಬಗ್ಗೆ ಮಾತನಾಡಿದ ಡಾ.ದಾದಾಪೀರ್ ನವಿಲೇಹಾಳ್ ಅವರು ಮಂಜುನಾಥ ಅವರ ಬಹುತೇಕ ಬರಹಗಳಲ್ಲಿ  ಆಪ್ತಭಾವತೆ ಇದೆ,ವೈಚಾರಿಕ ನೆಲೆಘಟ್ಟಿನ ಮೇಲೆ  ರೂಪಿತವಾಗಿವೆ ,ಆಯಾ ವಾರದ ವಿದ್ಯಮಾನಗಳ ಬರಹಗಳಾದರೂ ಯಾವಾಗಲೂ ಅವು ಪ್ರಸ್ತುತ ಎನ್ನುವ ರೀತಿಯಲ್ಲಿ ವೆ ಎಂದು ಅಭಿಪ್ರಾಯದಲ್ಲಿ ಪಟ್ಟರು.

ಈ ಕೃತಿಯಲ್ಲಿ ವಿಚಾರ,ಧರ್ಮ ಮತ್ತು ರಾಜಕಾರಣದ ಮೂರು ವರ್ಗ ಮಾಡಿದ್ದರೂ ಎಲ್ಲವೂ ವಿಚಾರಪೂರ್ವ ಬರಹಗಳಾಗಿವೆ,ರಾಜಕಾರಣಿಗಳು ಜಾತಿ,ಧರ್ಮ ವನ್ನು ಹೇಗೆ ಮತಗಳಿಕೆಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ,ಅದರಿಂದ ಹೇಗೆ ಅಶಾಂತಿಗೆ ಕಾರಣವಾಗಿದೆ ಎನ್ನುವ ಕುರಿತು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ ಎಂದರು.

ಇಂದು ಪತ್ರಕರ್ತರ ಬೆಲಕವಣಿಗೆಯೇ ವಿಚಿತ್ರವಾಗಿದೆ ಪಕ್ಷ,ಧರ್ಮಗಳ ಪರವಾಗಿ ತುತ್ತೂರಿ ಊದುತ್ತಿರುವ ಸಂದರ್ಭದಲ್ಲಿ ಮಂಜುನಾಥ ಅವರ ಈ ಬರಹಗಳು ನಿಜವಾದ ಒಬ್ಬ ಪತ್ರಕರ್ತ ಸಮಾಜದಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲರಿಗೂ ಗೊತ್ತಿದ್ದಂತೆ ಲಂಕೇಶ್ ಅವರ ವ್ಯಕ್ತಿತ್ವವೇ ಮಾದರಿಯಾಗಿತ್ತು ರಾಜಕಾರಣಿಗಳು ಪತ್ರಕರ್ತರ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದರು.ಯಾರೆ ರಾಜಕಾರಣಿಗಳಾದರೂ ಅವರನ್ನೆ ಹುಡುಕಿಕೊಂಡು ಹೋಗಬೇಕಿತ್ತು ಆದರೆ ಈಗ ಕಾಲ ಬದಲಾಗಿದೆ ಪತ್ರಕರ್ತರೆ ರಾಜಕಾರಣಿಗಳ ಮೊರೆ ಹೋಗುತ್ತಿದ್ದಾರೆ ಹಾಗಾಗಿಯೇ ಸುದ್ದಿಗಳ ಗುಣಮಟ್ಟ ಕ್ಷೀಣಿಸುತ್ತಿದೆ ಎಂದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ,ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ, ಸಾಹಿತಿ ವಿಶಾಲ ಆರಾಧ್ಯ ಇದ್ದರು.

Key words: Works based, humanity, ideological, popular, Senior writer, Shudra Srinivas