ನವದೆಹಲಿ,ಅಕ್ಟೋಬರ್,24,2025 (www.justkannada.in): ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಅವರ ಆರೋಪ ಸತ್ಯವಾದದ್ದು. ಬಿಜೆಪಿ ಜನರ ಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಹಿಂಬಾಗಲಿನಿಂದ ಅಧಿಕಾರಕ್ಕೆ ಬಂದಿರೋದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಅಕ್ರಮದಿಂದಲೇ ಬಿಜೆಪಿ ಕೇಂದ್ರದಲ್ಲೂ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್‌ಗೆ ಒಲವು ಇರುವ ಕಡೆ ಕಾಲ್ ಸೆಂಟರ್ ಸಂಸ್ಥೆಯನ್ನ ಹುಟ್ಟುಹಾಕಿ ಮೋಸ ಮಾಡಿದ್ದಾರೆ. ಅಳಂದ ಕ್ಷೇತ್ರದಲ್ಲಿ ಮತ ಡಿಲಿಟ್ ಗೆ 80 ರೂ. ನೀಡಿದ್ದಾರೆ. ಮತದಾನದ ಹಕ್ಕು ಕಸಿಯುವ ಕೆಲಸ ಮಾಡಲಾಗಿದೆ ಎಂದು ಕಿಡಿಕಾರಿದರು.
ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಂಡು ಅಧಿಕಾರಕ್ಕೆ ಬಂದಿದೆ. ಚುನಾವಣಾ ಆಯೋಗವನ್ನೇ ದುರುಪಯೋಗ ಮಾಡಿಕೊಂಡಿರೋದು ನಾವು ನೋಡುತ್ತಿದ್ದೇವೆ. ರಾಹುಲ್ ಗಾಂಧಿ ಹೇಳಿಕೆಯನ್ನ ಬಿಜೆಪಿಯವರು ಅಲ್ಲಗಳೆಯುತ್ತಿದ್ದರು. ಇದೀಗ ರಾಹುಲ್ ಗಾಂಧಿ ಆರೋಪ ಸತ್ಯವಾಗಿದೆ ಎಂದರು.
Key words: Vote, rigging, BJP, Minister, Ishwar Khandre







