ಸಿಎಲ್ ಪಿ ನಾಯಕರಾದವರೇ ಸಿಎಂ ಆಗ್ತಾರೆ- ಡಿಸಿಎಂ ಡಿಕೆಶಿಗೆ MLC ರಾಜೇಂದ್ರ ರಾಜಣ್ಣ ಟಾಂಗ್

ಬೆಂಗಳೂರು, ಅಕ್ಟೋಬರ್,24,2025 (www.justkannada.in): ಶಾಸಕರ ಬಲ ಇದ್ದವರೇ ಸಿಎಂ ಆಗೋದು  ಅಧಿಕಾರ ಹಂಚಿಕೆಗೆ ಶಾಸಕರ ಬೆಂಬಲ ಬೇಕಿಲ್ಲ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಎಂಎಲ್ ಸಿ ರಾಜೇಂದ್ರ ರಾಜಣ್ಣ ಕೌಂಟರ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ರಾಜೇಂದ್ರ ರಾಜಣ್ಣ, ಯಾರು ಸಿಎಲ್ ಪಿ ನಾಯಕರಾಗುತ್ತಾರೆಯೋ ಅವರೇ ಸಿಎಂ ಆಗುತ್ತಾರ.  ಶಾಸಕಾಂಗ ಸಭೆಯಲ್ಲಿ ಆಯ್ಕೆಯಾದವರೇ ಸಿಎಂ ಆಗುತ್ತಾರೆ ಎಂದು ಟಾಂಗ್ ಕೊಟ್ಟರು.

ಅಹಿಂದ ನಾಯಕತ್ವ ಕುರಿತು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರಾಜೇಂದ್ರ ರಾಜಣ್ಣ,  ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಆಸೆ ನಮಗಿದೆ   ಅಹಿಂದ ನಾಯಕರು ಸಿಎಂ ಆಗಬೇಕು  ಎಂದಿದ್ದಾರೆ.   2028ಕ್ಕೆ  ಸತೀಶ್ ಸಿಎಂ ಆಗಬೇಕು ಎಂಬ ಭಾವನೆ ಇರಬೇಕು ಯತೀಂದ್ರ ಅವರ ಹೇಳಿಕೆ ಅವರ ವೈಯಕ್ತಿಕವಾದದ್ದು. ಬಿಹಾರ ಎಲೆಕ್ಷನ್ ಬಳಿಕ ತುಂಬಾ ಬದಲಾವಣೆ ಆಗುತ್ತೆ ಎಂದರು.

Key words: CLP, leaders , CM, MLC Rajendra Rajanna, DCM,  DK Shivakumar