ಬಾಗಲಕೋಟೆ,ಅಕ್ಟೋಬರ್,23,2025 (www.justkannada.in): ಒಂದಲ್ಲ ಒಂದು ದಿನ ಸತೀಶ್ ಜಾರಕಿಹೊಳಿ ಸಿಎಂ ಆಗುತ್ತಾರೆ ಎಂದು ಅಬಕಾರಿ ಇಲಾಖೆ ಸಚಿವ ಆರ್.ಬಿ ತಿಮ್ಮಾಪುರ ತಿಳಿಸಿದ್ದಾರೆ.
ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪುರ, ಯತೀಂದ್ರ ಸಿದ್ದರಾಮಯ್ಯ ಅವರು ಕರೆಕ್ಟ್ ಆಗಿ ಹೇಳಿದ್ದಾರೆ. ಆ ನಾಯಕತ್ವ ಸಚಿವ ಸತೀಶ್ ಜಾರಕಿಹೊಳಿಯಲ್ಲಿದೆ. ಒಂದಲ್ಲ ಒಂದು ದಿನ ಸತೀಶ್ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಯತೀಂದ್ರ ಅವರದ್ದು ವೈಯಕ್ತಿಕ ಅಭಿಪ್ರಾಯ. ಸತೀಶ್ ಜಾರಕಿಹೊಳಿ ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗ್ತಾರೆ. ಸಿಎಂ ಸಿದ್ದರಾಮಯ್ಯ ದಾರಿಯಲ್ಲೇ ನಡೆಯುತ್ತಾರೆ ಎಂದು ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ.
Key words: Satish Jarkiholi, will, become, CM, Minister, R.B. Thimmapura