ಶೀಲ ಶಂಕಿಸಿ ಪತ್ನಿ ಕೊಲೆಗೈದ ಪತಿಯ ಬಂಧನ

ಮಂಡ್ಯ, ಅಕ್ಟೋಬರ್,23,2025 (www.justkannada.in):  ಶೀಲ ಶಂಕಿಸಿ ಪತ್ನಿಯನ್ನ ಪತಿ ಕೊಲೆಗೈದ ಘಟನೆ ಮಂಡ್ಯ ತಾಲ್ಲೂಕು ಕಾಳೇನಹಳ್ಳಿಯಲ್ಲಿ ನಡೆದಿದೆ.

ಶ್ವೇತಾ(36) ಕೊಲೆಯಾದ ಪತ್ನಿ.  ಲೋಕೇಶ್ ಹತ್ಯೆಗೈದ ಪತಿ.  ಶ್ವೇತಾ ಮತ್ತು ಲೋಕೇಶ್ ಕಳೆದ 17 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ನಡುವೆ ಪತಿ ಪತ್ನಿ ನಡುವೆ ನಿತ್ಯ ಜಗಳವಾಗುತ್ತಿತ್ತು ಎನ್ನಲಾಗಿದೆ.

ಈ ಮಧ್ಯೆ ಶೀಲಶಂಕಿಸಿ ಪತ್ನಿ ಶ್ವೇತಾಳನ್ನ ಪತಿ ಲೋಕೇಶ್ ಚಾಕುವಿನಿಂದ ಇರಿದು ಕೊಲೆಗೈದು ಮನೆಯ ಬಾಗಿಲಲ್ಲೇ ಕುಳಿತಿದ್ದನು. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Husband, arrested, murder, wife