ಎಲ್ಲರೂ ಸಂಜೆ ನಾಟಕ ಆಡಿದ್ರೆ: ಸಿಎಂ,ಡಿಸಿಎಂ ಹಗಲಲ್ಲೇ ನಾಟಕ ಮಾಡ್ತಾರೆ- ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ

ನವದೆಹಲಿ,ಅಕ್ಟೋಬರ್,21,2025 (www.justkannada.in):  ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು ಕಾರ್ಯಕ್ರಮ ಆಯೋಜನೆಗೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ ಸಹ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ವಿ.ಸೋಮಣ್ಣ, ಎಲ್ಲರೂ ಸಂಜೆ ನಾಟಕ ಆಡಿದರೆ,  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಗಲಲ್ಲೇ ನಾಟಕ ಮಾಡುತ್ತಾರೆ. ಈಗ ವಿರೋಧ ಮಾಡುವವರು ಮುಂದೆ ಆರ್ ಎಸ್ಎಸ್ ಸದಸ್ಯರಾಗಲಿದ್ದಾರೆ. ಸಿದ್ದರಾಮಯ್ಯ ಇಷ್ಟು ಸುಳ್ಳು ಹೇಳುತ್ತಾರೆ ಅಂತಾ ಗೊತ್ತಿರಲಿಲ್ಲ ಯಾವುದೇ ವಿಚಾರ ತಾರ್ಕಿಕ ಅಂತ್ಯಕ್ಕೆ  ತೆಗೆದುಕೊಂಡು ಹೋಗಲ್ಲ.  ಸಿದ್ದರಾಮಯ್ಯ  ಅಭಿವೃದ್ದಿ ಕಡೆ ಗಮನಹರಿಸಬೇಕಿದೆ ಎಂದು ಟಾಂಗ್ ಕೊಟ್ಟರು.

ಪಿಎಂ ಮೋದಿ ಅವರ ದೂರದೃಷ್ಟಿಯಿಂದ ಜಿಎಸ್ ಟಿ ಪರಿಷ್ಕರಣೆ ಮಾಡಲಾಗಿದೆ.  ಜನರಿಗೆ ಪ್ರಧಾನಿ ಮೋದಿ ಹಬ್ಬದ ಖುಷಿ ಹೆಚ್ಚಿಸಿದ್ದಾರೆ. ಅಕ್ಟೋಬರ್ 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನ ಆಚರಿಸುತ್ತೇವೆ ಸಂಸತ್ ನಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತೇವೆ ಎಂದು ವಿ.ಸೋಮಣ್ಣ ತಿಳಿಸಿದರು.

Key words: drama, CM, DCM, Union Minister, V. Somanna, criticizes