ದಕ್ಷಿಣ ಕನ್ನಡ, ಅಕ್ಟೋಬರ್,20,2025 (www.justkannada.in): ನಾನು ಸಿಎಂ ಆಗಿರುವವರೆಗೂ ಬಡವರ ಪರ ಯಾವುದೇ ಯೋಜನೆಗಳು ನಿಲ್ಲಲ್ಲ. ಮುಂದುವರೆಯುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೋಮು ಸೌಹಾರ್ದತೆ ಇದ್ದರೆ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಕೋಮ ಸೌಹಾರ್ದತೆಗೆ ವಿಶೇಷ ಗಮನ ಕೊಡಬೇಕು. ಸುಳ್ಳು ಹೇಳುವವರ ವಿರುದ್ಧ ಕಾನೂನು ತಂದು ಕೇಸ್ ದಾಖಲಿಸುತ್ತೇವೆ. ಕೋಮು ಸೌಹಾರ್ದತೆ ಹಾಳು ಮಾಡಿದ್ದು ಯಾರು ಅಂತ ಅರ್ಥ ಮಾಡಿಕೊಳ್ಳಿ ಎಂದು ಹೇಳಿಕೆ ನೀಡಿದರು.
ಈ ಜಿಲ್ಲೆಯ 8 ಕ್ಷೇತ್ರಗಳಲ್ಲೂ ಮುಂದಿನ ಚುನಾವಣೆಯಲ್ಲಿ ನೀವು ಆಶೀರ್ವಾದ ಮಾಡಬೇಕು, ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಾಡುತ್ತೇವೆ. ನುಡಿದಂತೆ ನಡೆದಿದ್ದೇವೆ. ಕೇಳುವ ಹಕ್ಕು ನಮಗಿದೆ ಎಂದರು.
Key words: Dakshina kannada, CM, Siddaramaiah, poor, Scheme