ಬಿಹಾರ ಚುನಾವಣೆಗೆ ಹಣ: ಬಿಜೆಪಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು

ಬೆಂಗಳೂರು,ಅಕ್ಟೋಬರ್,20,2025 (www.justkannada.in): ಬಿಹಾರ ಚುನಾವಣೆಗೆ  ರಾಜ್ಯದಿಂದ ಹಣ ಹೋಗುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಆರೋಪ ಮಾಡಿದ್ದ ಸಂಸದ ಬಿವೈ ರಾಘವೇಂದ್ರಗೆ ಡಿ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಬಿವೈ ರಾಘವೇಂದ್ರ ಅವರತ್ತಿರ ಏನಾದರೂ ದಾಖಲೆ ಇದೆಯೇ? ದಾಖಲೆಇದ್ದರೆ ಬಿಡುಗಡೆ ಮಾಡಲಿ ದಾಖಲೆ ಸಮೇತ  ಆರೋಪವನ್ನ ಸಾಬೀತು ಮಾಡಲು ಎಂದು ಸವಾಲು ಹಾಕಿದರು.

ಕೆಲವು ನಾಯಕರು ಹಿಟ್ ಅಂಡ್  ರನ್ ಮಾಡುತ್ತಿದ್ದಾರೆ. ಬಿಜೆಪಿ ಸಂಸದ ರಾಘವೇಂದ್ರ ಕೂಡ ಅವರಂತೆ ಆಗುವುದು ಬೇಡ ಎಂದು  ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

Key words: Money, Bihar elections, DCM, DK Shivakumar, BJP, allegation