ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಅವಕಾಶವಿದೆ- ಸಂಸದ ಶೆಟ್ಟರ್

ಹುಬ್ಬಳ್ಳಿ,ಅಕ್ಟೋಬರ್,20,2025 (www.justkannada.in):  ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಪಿಡಿಒರನ್ನು ಅಮಾನತು ಮಾಡಿದ ಸರ್ಕಾರದ ನಡೆ ವಿರುದ್ದ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಜಗದೀಶ್ ಶೆಟ್ಟರ್, ಆರ್.ಎಸ್.ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಅವಕಾಶವಿದೆ. ಆದರೂ  ಸಹ ಪಿಡಿಒ ಅಧಿಕಾರಿಯನ್ನು ಅಮಾನತು ಮಾಡಿರುವುದು ಕಾನೂನು ಬಾಹಿರ.  ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

ಆರ್.ಎಸ್.ಎಸ್ ನಲ್ಲಿ ಭಾಗಿಯಾಗಲು ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವೇ ಅವಕಾಶ ನೀಡಿದೆ. ಆರ್.ಎಸ್.ಎಸ್ ನಲ್ಲಿ ಭಾಗವಹಿಸಲು ನಿಯಮವಿದೆ. ಹೀಗಿದ್ದರೂ ಯಾವುದೇ ಕಾನೂನು ಇಲ್ಲದೇ ನಿಯಮಬಾಹಿರವಾಗಿ ಪಿಡಿಒರೊಬ್ಬರನ್ನ ರಾಜ್ಯ ಸರ್ಕಾರ ಅಮಾನತು ಮಾಡಿದೆ. ಸರ್ಕಾರದ ಕ್ರಮ ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಹರಿಹಾಯ್ದರು.

Key words: Government employees, participate, RSS, Jagadish Shettar