ಗೋವಾ,ಅಕ್ಟೋಬರ್,20,2025 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಐಎನ್‌ಎಸ್ ವಿಕ್ರಾಂತ್ ನಲ್ಲಿ ನೌಕಾಪಡೆ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸಿದರು. ಮೂರು ಸೇನೆ ಭೂಸೇನೆ ನೌಕಾಸೇನೆ, ವಾಯುಸೇನೆ ಯೋಧರಿಗೆ ಪ್ರಧಾನಿ ಮೋದಿ ಸೆಲ್ಯೂಟ್ ಹೊಡೆದರು.
ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿದ ಅವರು, ನೌಕಸೇನೆಯ ಜೊತೆ ದೀಪಾವಳಿ ಆಚರಣೆ ನನ್ ಸೌಭಾಗ್ಯ. ನಮ್ಮ ಯೋಧರು ಉತ್ಸಾಹದಿಂದ ಇದ್ದಾರೆ. ನನ್ನ ಕುಟುಂಬದ ಜೊತೆ ದೀಪಾವಳಿ ಆಚರಿಸುತ್ತಿದ್ದೇನೆ ಎಂದರು.
ಸೇನೆಯ ಶಸ್ತ್ರಾಸ್ತ್ರವನ್ನ ಈಗ ಭಾರತದಲ್ಲೇ ತಯಾರಿಸಲಾಗುತ್ತಿದೆ ಬ್ರಹ್ಮೋಸ್ ಹೆಸರು ಕೇಳಿದರೆ ಕೆಲವರು ಭಯಪಡುತ್ತಾರೆ ಸಿಂಧೂರ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಬ್ರಹ್ಮೋಸ್ ಆಕಾಶ್ ಕ್ಷಿಪಣಿ ಉತ್ತಮ ಕಾರ್ಯನಿರ್ವಹಣೆ ಮಾಡಿವೆ ಎಂದರು.
ಮಾವೊವಾದಿ ನಕ್ಸಲರ ನಿರ್ಮೂಲನೆಗೆ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಈಗ ಕೇವಲ 11% ನಕ್ಸಲಿಸಂ ಪ್ರಭಾವ ಉಳಿದಿದೆ. ಛತ್ತೀಸ್ಗಡದ ಮೂರು ಜಿಲ್ಲೆಗಳಲ್ಲಿ ಮಾತ್ರ ನಕ್ಸಲಿಸಂ ಪ್ರಭಾವ ಇದೆ 100ಕ್ಕೂ ಹೆಚ್ಚು ಜಿಲ್ಲೆಗಳು ನಕ್ಸಲರ ಮುಕ್ತ ಆಗಿವೆ. ನಕ್ಸಲ್ ಪ್ರಭಾವದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಶದಲ್ಲಿ ಈಗ ನಕ್ಸಲರು ಶರಣಾಗತಿ ಆಗುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.
Key words: PM Modi, celebrates, Dipawali, Navy