ಬೆಂಗಳೂರು,ಅಕ್ಟೋಬರ್,18, 2025 (www.justkannada.in): ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಸಂಸ್ಥೆಗಳು ಕಾರ್ಯಕ್ರಮ ಮಾಡಲು ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮ ಮಾಡಿದ್ದು ಬಿಜೆಪಿಯೇ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನದ ಬಗ್ಗೆ ಗೊತ್ತಿಲ್ಲ. ಪ್ರಿಯಾಂಕ್ ಖರ್ಗೆ ಆರ್ ಎಸ್ ನಿಷೇಧೀಸಬೇಕು ಎಂದು ಎಲ್ಲೂ ಹೇಳಿಲ್ಲ. ಎಲ್ಲರೂ ಪ್ರಿಯಾಂಕ್ ಖರ್ಗೆ ಮಾತನ್ನ ತಪ್ಪಾಗಿ ಅರ್ಥೈಸಿದ್ದಾರೆ ಸರ್ಕಾರಿ ಸ್ಥಳ ಕಾಲೇಜು ಅವರಣದಲ್ಲಿ ಅನುಮತಿ ಪಡೆಯಬೇಕು. ಈ ನಿಯಮ ಬಿಜೆಪಿಯೇ ಮಾಡಿದ್ದು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಈ ನಿಯಮ ಆಗಿದೆ. ಆರ್ ಎಸ್ಎಸ್ ನಿಷೇಧ ಮಾಡಬೇಕು ಅಂತಾ ನಾವು ಇದನ್ನ ಮಾಡಿಲ್ಲ ಎಂದರು.
ನಮಾಜ್ ಗೆ ಅವಕಾಶ ಕೊಡಬಾರದು ಎಂದು ಶಾಸಕ ಯತ್ನಾಳ್ ಪತ್ರ ವಿಚಾರ ಕುರಿತು ಪ್ರತಿಕ್ರಿಯಿಸಿದ ಶರಣಪ್ರಕಾಶ್ ಪಾಟೀಲ್, ಯತ್ನಾಳ್ ಕ್ಷೇತ್ರಕ್ಕೆ ಸೀಮಿತವಾಗಿ ಮಾತನಾಡುತ್ತಾರೆ. ಶಾಸಕ ಯತ್ನಾಳ್ ಅವರ ಕ್ಷೇತ್ರ ಹೇಗಿದೆ ಅಂತಾ ನಿಮಗೆ ಗೊತ್ತಿದೆ ಹೀಗಾಗಿ ಅವರು ಅದರ ಬಗ್ಗೆ ಮಾತಾಡಿದ್ದಾರೆ. ಯತ್ನಾಳ್ ಎಂಎಲ್ ಸಿ ಎಂಪಿ ಆಗೊ ಮುಂಚೆ ಅವರ ನಡವಳಿಕೆ ಹೇಗಿತ್ತು. ಈಗ ಹೇಗಿದೆ ನೋಡಿ ನಿಮಗೆ ಗೊತ್ತಾಗುತ್ತೆ ಎಂದರು.
Key words: RSS, BJP, rule, Minister, Sharan Prakash Patil