ಬೆಂಗಳೂರು,ಅಕ್ಟೋಬರ್,18,2025 (www.justkannada.in): ಅಧಿಕಾರಿಗಳು ಇ-ಖಾತೆಗೆ ಹಣ ಕೇಳುತ್ತಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನ ಅಮಾನತು ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದರು.
ಇಂದು ಡಿಸಿಎಂ ಡಿಕೆ ಶಿವಕುಮಾರ್ ನಡಿಗೆಯ ಮೂಲಕವೇ ಫುಲ್ ರೌಂಡ್ಸ್ ಹಾಕಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಟಿಸಿ ಪಾಳ್ಯದ ವೆಂಗಯ್ಯ ಇಕೋ ಪಾರ್ಕ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಮಸ್ಯೆ ಆಲಿಸುವ ವೇಳೆ ಇ-ಖಾತಾಗೆ ಅಧಿಕಾರಿಗಳು ಹಣ ಕೇಳುತ್ತಿದ್ದಾರೆ. 15 ಸಾವಿರಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದರು. ವಿಜನಪುರದ ಆರ್ ಐ ಬಸವರಾಜು ವಿರುದ್ದ ದೂರು ನೀಡಿದರು. ಈ ವೇಳೆ ಡಿಕೆ ಶಿವಕುಮಾರ್ ಅಧಿಕಾರಿಯನ್ನ ಸಸ್ಪೆಂಡ್ ಮಾಡಲು ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರಿಗೆ 6 ಸಾವಿರ ಕೋಟಿ ಟ್ಯಾಕ್ಸ್ ಬರುತ್ತಿದೆ ಈ ಭಾಗದ ಜನ ಹೆಚ್ಚಿನ ಕಂದಾಯ ಕಟ್ಟಿದ್ದಾರೆ. 5 ಪಾಲಿಕೆಗಳು ಆದ ಮೇಲೆ ನಿಮ್ಮ ಸಮಸ್ಯೆ ಆಲಿಸುತ್ತಿದ್ದೇವೆ ಎಂದರು.
Key words: Complaint, money, E-khata, DCM, DK Shivakumar