ನೆಫ್ರೋ ಯೂರೋಲಜಿ ಸಂಸ್ಥೆಗೆ ‘NABH’ ಮಾನ್ಯತೆ..

ಬೆಂಗಳೂರು,ಅಕ್ಟೋಬರ್,17,2025 (www.justkannada.in): ಮೂತ್ರಪಿಂಡ ಮತ್ತು ಮೂತ್ರಾಂಗ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ನೆಫ್ರೋ ಯೂರೋಲಜಿ ಸಂಸ್ಥೆಯು ಪ್ರತಿಷ್ಠಿತ ರಾಷ್ಟ್ರೀಯ ಹಾಸ್ಪಿಟಲ್ ಅಕ್ರೆಡಿಟೇಶನ್ ಮಂಡಳಿ (NABH) ಮಾನ್ಯತೆ ಪತ್ರವನ್ನು ಪಡೆದುಕೊಂಡಿದೆ.

ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ನೆಫ್ರೋ-ಯುರಾಲಜಿ ಸಂಸ್ಥೆ 160 ಹಾಸಿಗೆ ಸಾಮರ್ಥ್ಯದೊಂದಿಗೆ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಸಂಸ್ಥೆಯ ಘಟಕವನ್ನು ಸ್ಥಾಪಿಸಿ ಸೇವೆಯನ್ನು ನೀಡುತ್ತಿದೆ.

ಈ ಸಂಸ್ಥೆ ದೇಶದ ಅಗ್ರ 10 ವಿಶೇಷ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ಸಂಸ್ಥೆಯು ಸುರಕ್ಷತೆ ಮತ್ತು ಅತ್ಯುತ್ತಮ ವೈದ್ಯಕೀಯ ಗುಣಮಟ್ಟಕ್ಕೆ ಎನ್ಎಬಿಎಚ್‌ ನೀಡುವ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಸೇವೆಗೆ ದೊರೆತಿರುವ ರಾಷ್ಟ್ರೀಯ ಮಾನ್ಯತೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಗೆ ದೊರೆತಿರುವ ಪ್ರಮಾಣಪತ್ರವನ್ನು ತಮ್ಮ ಗೃಹ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆಫ್ರೋ ಯೂರೋಲಜಿ ಸಂಸ್ಥೆಯ ನಿರ್ದೇಶಕ ಆರ್.ಎಂ. ಶಿವಲಿಂಗಯ್ಯ, ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ ಅವರು, ಗುಣಮಟ್ಟದ ಆರೋಗ್ಯ ಸೇವೆಯನ್ನು ಪ್ರತಿಯೊಬ್ಬರಿಗೂ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ನೆಫ್ರೋ ಯುರಾಲಜಿಯಂತಹ ಸಂಸ್ಥೆಗಳು ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಇಂತಹ ರಾಷ್ಟ್ರೀಯ ಮನ್ನಣೆಯ ಸಂಸ್ಥೆಗಳಲ್ಲಿ ಬಡ ಜನರು ಸಹ ಮೂತ್ರಾಂಗ ಚಿಕಿತ್ಸೆಯ ಅತ್ಯುನ್ನತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಈ ಸಂಸ್ಥೆಯಲ್ಲಿ ಕಡು ಬಡವ/ನಿರ್ಗತಿಕ/ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ENGLISH SUMMARY..

Nephro Urology Institution Earns NABH Accreditation

The Nephro Urology Institution, a leading provider of urological and nephrological care in Bangalore, has marked a significant achievement by securing the prestigious NABH (National Accreditation Board for Hospitals & Healthcare Providers) accreditation. This certification is a testament to the institution’s unwavering commitment to the highest standards of patient safety and clinical excellence.

This national-level recognition further solidifies the institution’s reputation, coming soon after it was ranked among the top 10 specialty hospitals in the country.

The accreditation certificate was unveiled at an informal occasion on October 16, 2025, by the Chief Minister of Karnataka, Siddaramaiah. The gathering was attended by Shri R.M. Shivalingayya, Director of the Nephro Urology Institution, and the Founding Director, Dr. G.K. Venkatesh and others.

On this occasion, Chief Minister Siddaramaiah said, “Quality health services are the cornerstone of public well-being. Our government is actively promoting initiatives and partnerships that elevate healthcare standards, making advanced and affordable treatment accessible to every citizen.” He commended the institution for its achievement.

R.M. Shivalingayya, Director, expressed his pride, stating, “The NABH accreditation is a validation of our team’s relentless pursuit of excellence. It assures our patients in both Bangalore and Mysore that they are receiving care that meets the most stringent national standards. Our unit in Mysore, located within the K.R. Hospital campus, is committed to serving the community with the same high-quality care.”

Beyond this achievement, the Nephro Urology Institution is actively pursuing additional specialized certifications. This accreditation will also facilitate easier access to various government health schemes for patients, making high-quality urological care more accessible to all.

About Nephro Urology Institution:

The Nephro Urology Institution is a premier healthcare provider specializing in nephrology and urology, with state-of-the-art facilities in Bangalore. Renowned for its clinical expertise and compassionate patient care, the institution has been consistently ranked among the top specialty hospitals in India.

Key words: Nephro Urology Institution, NABH, Accreditation