ಬೆಂಗಳೂರು, ಅಕ್ಟೋಬರ್,17,2025 (www.justkannada.in): ಬಾಕಿ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘ ಮತ್ತೆ ಸಿಡಿದಿದ್ದು ಇದೀಗ ಒಂದು ತಿಂಗಳ ಡೆಡ್ ಲೈನ್ ನೀಡಿದೆ.
ಸರ್ಕಾರದಿಂದ ಸುಮಾರು 33 ಸಾವಿರ ಕೋಟಿ ರೂ. ಬಾಕಿ ಹಣ ಬಿಡುಗಡೆಯಾಗಬೇಕಿದ್ದು ದೀಪಾವಳಿಯಿಂದ ಒಂದು ತಿಂಗಳೊಳಗೆ ಬಾಕಿ ಹಣ ಬಿಡುಗಡೆ ಮಾಡದಿದ್ದರೇ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ಮಾತನಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್, ಸರ್ಕಾರದಿಂದ ಗುತ್ತಿಗೆದಾರರಿಗೆ 33 ಸಾವಿರ ಕೋಟಿ ರೂ. ಹಣ ಬಿಡುಗಡೆಯಾಗಬೇಕಿದೆ. ಸಣ್ಣ ಗುತ್ತಿಗೆದಾರರ ಪತ್ನಿಯರು ಮಕ್ಕಳು ನಮಗೆ ಕರೆ ಮಾಡಿ ಕೇಳುತ್ತಿದ್ದಾರೆ. ಗುತ್ತಿಗೆದಾರರು ಇದೀಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ನಾವು 60 ಪರ್ಸೆಂಟ್ 80 ಪರ್ಸೆಂಟ್ ಅಂದಿಲ್ಲ. ಪ್ರತಿ ಇಲಾಖೆ ಸಚಿವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ನಮಗೆ ಸಂಘರ್ಷ ಬೇಕಾಗಿಲ್ಲ, ಪ್ರೀತಿ ವಿಸ್ವಾಸದಿಂದ ಹೋಗಬೇಕು . ದೀಪಾವಳಿ ನಂತರ ಕಾಮಗಾರಿ ನಿಲ್ಲಿಸಿ ಮುಷ್ಕರ ನಡೆಸಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಮಂಜುನಾಥ್ ವಾರ್ನಿಂಗ್ ನೀಡಿದರು.
Key words: Contractors, association, Government, deadline, release, money