ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ: ನವೆಂಬರ್ ಕ್ರಾಂತಿ ಬರೀ ಚರ್ಚೆ ಅಷ್ಟೆ- ಸಚಿವ ಸತೀಶ್ ಜಾರಕಿಹೊಳಿ

ಮೈಸೂರು,ಅಕ್ಟೋಬರ್,15,2025 (www.justkannada.in): ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ನವೆಂಬರ್ ಕ್ರಾಂತಿ ಬರೀ ಚರ್ಚೆ ಅಷ್ಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನವೆಂಬರ್ ಕ್ರಾಂತಿ ಬರೀ ಚರ್ಚೆ ಅಷ್ಟೆ. ಒಳಗಡೆ ಏನು ಇಲ್ಲ. ಮಾಧ್ಯಮಗಳಲ್ಲಿ ಪ್ರಚಾರ ಆಗಿದೆ. ಕೆಲವರು ಅದನ್ನ ಹೇಳುತ್ತಾರೆ. ಆದರೆ ಪಕ್ಷದಲ್ಲಿ ಅದರ ಬಗ್ಗೆ ಯಾವುದೇ ರೀತಿ ಚರ್ಚೆ ಇಲ್ಲ ಎಂದರು.

ದಲಿತ ಸಿಎಂ ವಿಚಾರ ಮೊದಲಿನಿಂದಲೂ ಇದೆ ಅದೇನು ಹೊಸದೇನಲ್ಲ. ಅವರವರ ಅಭಿಮಾನಿಗಳು ಬೆಂಬಲಿಗರು ಹೇಳೆ ಹೇಳುತ್ತಾರೆ. ಅಂತಿಮವಾಗಿ ನಮ್ಮ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.

ತಾವು ಸಿಎಂ ರೇಸ್ ನಲ್ಲಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಆ ವಿಚಾರವನ್ನ ಬಿಟ್ಟಿದ್ದೇನೆ. ನಾನೇ ಹೇಳಿದ್ದೇನೆ ನಾನು ಸಿಎಂ ಆಕಾಂಕ್ಷಿ ಅಲ್ಲ ಅಂತಾ. ನಾವು ಪಕ್ಷದಲ್ಲಿದ್ದೇವೆ ಆದರೆ ಸಿಎಂ ಬದಲಾವಣೆ ಬಗ್ಗೆ ಉತ್ತರ ಕೊಡುವಂತ ಸ್ಥಾನದಲ್ಲಿಲ್ಲ ಎಂದರು.

Key words: no discussion, changing CM, Minister, Satish Jarkiholi