ವಿಜಯನಗರ, ಅಕ್ಟೋಬರ್,15,2025 (www.justkannada.in): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿ ವಿರೂಪಾಕ್ಷೇಶ್ವರನ ದರ್ಶನ ಪಡೆದರು.
ದಕ್ಷಿಣ ಕಾಶಿ ಎಂದೂ ಕರೆಸಿಕೊಳ್ಳುವ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ ಹಂಪಿಯ ಆನೆ ಲಕ್ಷ್ಮೀಯಿಂದ ಆಶೀರ್ವಾದ ಪಡೆದರು.
ಬಳಿಕ ಮಾತನಾಡಿದ ಅವರು, ನನಗೆ ಬಹಳಷ್ಟು ಜನ ಹಂಪಿಯನ್ನ ನೋಡಿ ಎನ್ನುತ್ತಿದ್ದರು. ಇಂದು ಆ ಅವಕಾಶ ನನಗೆ ಸಿಕ್ಕಿರೋದು ನನ್ನ ಅದೃಷ್ಟ. ಹಂಪಿಯ ಸಾಂಸ್ಕೃತಿಕ ಪರಂಪರೆ ಕಣ್ತುಂಬಿಕೊಂಡಿದ್ದಕ್ಕೆ ಸಂತಸವಾಗಿದೆ. ಇಲ್ಲಿಯ ಕಲೆ ಸಂಸ್ಕೃತಿ ಈ ನಾಡಿನ ಪರಂಪರೆಯ ಪ್ರತೀಕವಾಗಿದೆ. ಯುನಿಸ್ಕೋ ಗುರುತಿಸಿರುವ ಐತಿಹಾಸಿಕ ತಾಣ ಹಂಪಿ. ಇಲ್ಲಿನ ಪ್ರತಿಯೊಂದು ಶಿಲೆಯೂ ಪರಂಪರೆ ಪ್ರತಿಬಿಂಬಿಸುತ್ತಿದೆ. ಇಲ್ಲಿ ಉತ್ಖನನ ಕಾರ್ಯ ನಡೆಯುತ್ತಿವೆ. ಹಂಪಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Key words: Union Finance Minister, Nirmala Sitharaman, Visit, Hampi, Virupaksha Temple