ಬೀದರ್,ಅಕ್ಟೋಬರ್,14,2025 (www.justkannada.in): ನಮಗೆ ಕೇಂದ್ರದ ʻನವೆಂಬರ್ ಕ್ರಾಂತಿʼ ಬಗ್ಗೆ ಕುತೂಹಲವಿದೆ.. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ನಮಗೂ ಕೇಂದ್ರದ ʻನವಂಬರ್ ಕ್ರಾಂತಿʼ ಬಗ್ಗೆ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ. ಇನ್ನು ನಿನ್ನೆಯ ಡಿನ್ನರ್ ಮೀಟಿಂಗ್ ನಲ್ಲಿ ಸಂಪುಟ ಪುನರ್ ರಚನೆ ಬಗ್ಗೆ ಚರ್ಚಿಸಿಲ್ಲ. ಸಂಪುಟ ಪುನರ್‌ರಚನೆ ಮಾಡುವುದಾದರೆ ಸಿಎಂ ಡಿಸಿಎಂಗೆ ಪೂರ್ಣ ಅಧಿಕಾರ ಇದೆ, ಮಾಡಲಿ ಎಂದರು.
ಆರ್ ಎಸ್ ಎಸ್ ಗೆ ಮಾತ್ರ ದೇಶಪ್ರೇಮವಲ್ಲ ಎಲ್ಲರಿಗೂ ದೇಶಪ್ರೇಮವಿದೆ. 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ ಆರ್‌ಎಸ್ ಎಸ್ ಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ ಎಂದು ಸಚಿವ ಸಂತೋಷ್ ಲಾಡ್ ಕುಟುಕಿದರು.
Key words: Central, November Revolution, Minister, Santosh Lad