RSS ಒಂದು ಪೊಲಟಿಕಲ್ ಸಂಸ್ಥೆ: ಸರ್ಕಾರ ತೆಗೆಯುವುದರಲ್ಲಿ ಅದರ ಪಾತ್ರವಿದೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಅಕ್ಟೋಬರ್,13,2025 (www.justkannada.in):  ಆರ್ ಎಸ್ ಎಸ್, ಬಜರಂಗದಳ,ಎಬಿವಿಪಿ   ಒಂದು ಪೊಲಟಿಕಲ್ ಸಂಸ್ಥೆ. ಸಚಿವರ ಬದಲಾವಣೆ ಸರ್ಕಾರ ತೆಗೆಯುವುದರಲ್ಲಿ ಇವುಗಳ ಪಾತ್ರವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ಆರ್ ಎಸ್ ಎಸ್ ಚಟುವಟಿಕೆಗಳಿಗೆ   ಅವಕಾಶ ಕೊಡಬಾರದೆಂದು ಅವರು ಹೇಳಿದ್ದು ಸರಿಯಿದೆ. ಆರ್ ಎಸ್ ಎಸ್ ಒಂದು ಪೊಲಿಟಿಕಲ್ ಸಂಸ್ಥೆ. ಅದು ನೇರವಾಗ ರಾಜಕೀಯದಲ್ಲಿ ಭಾಗಿಯಾಗಿರೋದು ಗೊತ್ತಿದೆ. ರಾಜಕೀಯದಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಿಗೂ ಗೊತ್ತಿದೆ. ಆರ್ ಎಸ್ ಎಸ್, ಬಿಜೆಪಿ, ಬಜರಂಗದಳ ಎಬಿವಿಪಿ ಎಲ್ಲವೂ ಪೊಲಟಿಕಲ್ ಸಂಸ್ಥೆಗಳು.  ಸಚಿವರ ಬದಲಾವಣೆ ಸರ್ಕಾರ ತೆಗೆಯುವುದು ಅವರ ಪಾತ್ರವಿದೆ ಎಂದರು.

ಸರ್ಕಾರದ ಜಾಗವನ್ನ ಆರ್ ಎಸ್ಎಸ್  ಉಪಯೋಗಿಸುವುದು ಸರಿಯಲ್ಲ. ಖಾಸಗಿ ಜಾಗವನ್ನ ಬೇಕಾದರೆ ಅವರು ಉಪಯೋಗ ಮಾಡಿಕೊಳ್ಳಲಿ. ಸರ್ಕಾರಿ ಶಾಲೆ ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಅವಕಾಶ ಕೊಡಬಾರದು ಅಧಿಕಾರಿಗಳು ಆರ್ ಎಸ್ ಎಸ್ ಸದಸ್ಯರಾಗುವುಕ್ಕೂ ಅವಕಾಶ ಕೊಡಬಾರದು. ಇದು ಕೇಂದ್ರ ಸರ್ಕಾರದಿಂದ ಆಗಿರೋ ದೊಡ್ಡ ತಪ್ಪು ಪೊಲೀಸ್ ಅನುಮತಿ ತೆಗೆದುಕೊಂಡು ಬೇಕಾದರೇ ಮಾಡಲಿ ಎಂದರು.

ದ್ವೇಷ ಕೊಮುಗಲಭೆ ಮಾಡುವುದೇ ಆರ್ ಎಸ್ ಎಸ್ ಸಿದ್ದಾಂತ. ಆರ್ ಎಸ್ ಎಸ್ ನವರು ಏನಾದರೂ ತ್ಯಾಗ ಮಾಡಿದ್ದಾರಾ ಏನು ಇಲ್ಲ. ಅದೊಂದು ಪ್ಯಾಸಿಸ್ಟ್ ಪಕ್ಷ  ಅದರ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ  ಆರ್ ಎಸ್ ಎಸ್  ಬಗ್ಗೆ ಕ್ಯಾಬಿನೆಟ್ ನಿರ್ಧಾರ ಬೇಕಾಗಿಲ್ಲ ಇದು ಆಡಳಿತಾತ್ಮಕ ನಿರ್ಧಾರ ಅಷ್ಟೆ ಸಾಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Key words: RSS, political organization, Minister, Dinesh Gundu Rao