ಮೈಸೂರು,ಅಕ್ಟೋಬರ್,13,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯ ಮೈಸೂರು ನಗರ ಅಂತರ ಕಾಲೇಜು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕ್ರೀಡಾಪಟುಗಳಾದ ವರ್ಷ ಎಂ.ಎ, ರೀತು ಎ, ಪ್ರಿಯದರ್ಶಿನಿ ಎಚ್. ಪಿ ಕಾವೇರಿ ಬಿ ಎನ್, ಧನ್ಯಶ್ರೀ ಆರ್, ಪ್ರಥಮ ಸ್ಥಾನ ಗಳಿಸಿ ಪಾರಿತೋಷಕವನ್ನು ಪಡೆದರು.
ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ, ಟೆರಿಷಿಯನ್ ಕಾಲೇಜು, ಎಂ ಐಟಿ ಕಾಲೇಜು ಇವರ ಸಹಯೋಗದೊಂದಿಗೆ ಕಾವೇರಿ ಯೂತ್ ಸ್ಪೋರ್ಟ್ಸ್ ಅಕಾಡೆಮಿ ಕಾವೇರಿ ಸ್ಕೂಲ್ ಕುವೆಂಪು ನಗರದಲ್ಲಿ ಆಯೋಜಿಸಿದ್ದ ಚೆಸ್ ಸ್ಪರ್ಧೆಯಲ್ಲಿ ಭವಾನಿ ಸಿಎಸ್, ಹೇಮಲತಾ, ದೇವಿಕ, ಗೀತಪ್ರಿಯ, ಪೂರ್ವಿ ತೃತೀಯ ಸ್ಥಾನ ಪಡೆದರು.
ಪಂದ್ಯಾವಳಿಯಲ್ಲಿ ಮೈಸೂರು ನಗರದ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಒಳಗೊಂಡಂತೆ ಸುಮಾರು 25 ತಂಡಗಳು ಭಾಗವಹಿಸಿದ್ದವು.
ವಿಜೇತ ಕ್ರೀಡಾಪಟುಗಳಿಗೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಅಬ್ದುಲ್ ರಹಿಮಾನ್ ಎಂ, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಪ್ರತಿಮ ಕೆ ಆರ್ ಹಾಗೂ ಅಧ್ಯಾಪಕರು, ಅಧ್ಯಾಪಕೇತಕರು, ಸಿಡಿಸಿ ನೌಕರರು ಅಭಿನಂದಿಸಿದರು.
Key words: Athletes, Mysore, Women’s Science College, won, medals