ನಾನು ಹಿಂದೂ ಧರ್ಮದ ವಿರೋಧಿ ಅಲ್ಲ. RSS  ಇಲ್ಲದಿದ್ದರೇ ಬಿಜೆಪಿ ಶೂನ್ಯ- ಸಚಿವ ಪ್ರಿಯಾಂಕ್ ಖರ್ಗೆ

ಕಲಬುರುಗಿ,ಅಕ್ಟೋಬರ್,13,2025 (www.justkannada.in):  ನಾನು ಹಿಂದೂ, ಹಿಂದೂ ವಿರೋಧಿ ಅಲ್ಲ, ನಾನು ಆರ್ ಎಸ್ ಎಸ್ ವಿರೋಧಿ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಆರ್ ಎಸ್ ಎಸ್ ನ ಕೈಗೊಂಬೆ. ಆರ್ ಎಸ್ ಎಸ್ ಇಲ್ಲದ  ಬಿಜೆಪಿ ಶೂನ್ಯ. ಕರಾವಳಿ ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ ಮಾಹಿತಿ ತೆಗಯಿರಿ. ಲಾಟಿ ಹಿಡಿದು ಓಡಾಡುವುದನ್ನ ನಿಲ್ಲಿಸಿ ತ್ರಿವರ್ಣಧ್ವಜ ಹಿಡಿದು ಓಡಾಡಿ.  ಬೇರೆ ಸಂಘಟನೆಗಳು ದೊಣ್ಣೆ ಹಿಡಿದುಕೊಂಡು ಓಡಾಡಿದರೆ ಒಪ್ತೀರಾ? ಎಂದು ಪ್ರಶ್ನಿಸಿದರು.

ಶಾಲೆಗಳಲ್ಲಿ ಆರ್ ಎಸ್ ಎಸ್ ನಿಂದ ನಡೆಯುತ್ತರುವ ಬ್ರೈನ್ ವಾಷ್ ನಿಲ್ಲಬೇಕು ಆರ್ ಎಸ್ ಲೈಂಗಿಕ ಕಿರುಕುಳದ ಬಗ್ಗೆ ಪುಸ್ತಕವನ್ನ ಹನುಮೇಗೌಡ ಎಂಬುವವರು ಬರೆದಿದ್ದಾರೆ. ಆರ್ ಎಸ್ ಎಸ್ ನವರಿಗೆ ಇತಿಹಾಸ ಗೊತ್ತಿಲ್ಲದಿದ್ದರೆ ನಾನು ಪಾಠ ಮಾಡುತ್ತೇನೆ . ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆ ಬೇಡ ಎಂದಿದ್ದೇನೆ.  ಸಂವಿಧಾನ ಬೇಡ ಮನಸ್ಮೃತಿ ಬೇಕು ಎನ್ನವವರು ದೇಶಭಕ್ತರಾ..? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

Key words: I am not, against, Hinduism, Minister, Priyank Kharge