ಬೆಂಗಳೂರು, ಅಕ್ಟೋಬರ್,11,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ನಡಿಗೆ ಅಭಿಯಾನ ಆರಂಭಿಸಿದ್ದು ಸಂವಾದ ನಡೆಸಿ ಜನರ ಸಮಸ್ಯೆ ಆಲಿಸಿದರು.
ಪ್ರತಿದಿನ ಜಿಬಿಎಗೆ ಡಿಸಿಎಂ ಡಿಕೆ ಶಿವಕುಮಾರ್ ಸಮಯ ಮೀಸಲಿಟ್ಟಿದ್ದು ಬೆಂಗಳೂರು ನಡಿಗೆ ಅಭಿಯಾನ ಆರಂಭಿಸಿ ಲಾಲ್ ಬಾಗ್ ನಲ್ಲಿ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದರು. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ,ಜಿಬಿಎ ಕೇಂದ್ರ ಪಾಲಿಕೆ ಆಯುಕ್ತ ಚೋಳನ್ ಸಾಥ್ ನೀಡಿದರು.
ಟ್ರಾಫಿಕ್ ನಿಂದ ಸಮಸ್ಯೆಯಾಗಿದೆ ಪಾರ್ಕಿಗ್ ಇದ್ರೂ ಎಲ್ಲಂದರಲ್ಲಿ ವಾಹನ ನಿಲ್ಲಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಬಳಿ ಸಾರ್ವಜನಿಕರು ಸಮಸ್ಯೆ ತೋಡಿಕೊಂಡರು. ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್ ಬಗೆಹರಿಸುವ ಭರವಸೆ ನೀಡಿದರು.
Key words: Bengaluru Walking Campaign, DCM, DK Shivakumar