ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಕೇಸ್: ಸರ್ಕಾರದ ವಿರುದ್ದ ಪ್ರತಾಪ್ ಸಿಂಹ ಆಕ್ರೋಶ

ಮೈಸೂರು,ಅಕ್ಟೋಬರ್,10,2025 (www.justkannada.in): ಮೈಸೂರಿನಲ್ಲಿ ನಡೆದ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾರೊಬ್ಬರೂ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಒಂದರ ಹಿಂದೆ ಒಂದು ಕೊಲೆ ಆಗುತ್ತಿದೆ. ಮೈಸೂರಿಗೆ ಏನಾಗಿದೆ. ಉಕ್ರೇನ್ರ-ರಷ್ಯಾ ಯುದ್ದದ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಆದರೆ ಬಾಲಕಿಯ ಕೊಲೆ ಪ್ರಕರಣದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಪ್ರಿಯಾಂಕ್ ಖರ್ಗೆ ಸಂತೋಷ್ ಲಾಡ್ ಯಾರಾದರೂ ಒಬ್ಬರಾದರೂ ಬಾಯಿ ತೆರೆಯುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಏಕೆ ಈ ಬಗ್ಗೆ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ ಅವರೇ ಯಾವ ಪುರುಷಾರ್ಥಕ್ಕೆ ಸಿಎಂ ಆಗಿದ್ದೀರಾ?  ಪೊಲೀಸರಿಗೆ ದಕ್ಷತೆ ಇದೆ ಆದರೆ ಕೆಲಸ ಮಾಡಲು  ಮುಕ್ತ ಅವಕಾಶವಿಲ್ಲ ಎಂದು ಪ್ರತಾಪ್ ಸಿಂಹ ಹರಿಹಾಯ್ದರು.

Key words: Girl, rape, murder case, Prathap Simha, against, government