ಬೆಂಗಳೂರು,ಅಕ್ಟೋಬರ್,9,2025 (www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ 2.5 ವರ್ಷ ತುಂಬಲಿದ್ದು ಈ ಮಧ್ಯೆ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಸಚಿವ ಬೋಸರಾಜು ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಸ್.ಎನ್ ಬೋಸರಾಜು, ನವೆಂಬರ್ ನಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ. ಸರ್ಕಾರ ಬಂದು 2.5 ವರ್ಷವಾದ ಹಿನ್ನೆಲೆ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರಿಗೆ ಅವಕಾಶ ಕೊಡುತ್ತೇವೆಂದು ಚರ್ಚೆಯಾಗಿದೆ ಸಂಪುಟ ವಿಸ್ತರಣೆ ಸಿಎಂ ಹೈಕಮಾಂಡದ ಗೆ ಬಿಟ್ಟಿದ್ದು ಎಂದರು.
ಹೈಕಮಾಂಡ ಮಾತಿಗೆ ಬದ್ದ. ಹೈಕಮಾಂಢ್ ಹೇಳಿದರೆ ತ್ಯಾಗಕ್ಕೆ ಸಿದ್ದರಿರಬೇಕು. ವರಿಷ್ಠರು ಹೇಳಿದ್ರೆ ಚುನಾವಣೆಗೂ ತಯಾರಾಗಬೇಕು. ಕೆಲವೊಮ್ಮೆ ಒಳ್ಳೆ ಕೆಲಸ ಮಾಡಿದರೂ ಸ್ಥಾನ ಬಿಡಬೇಕಾಗುತ್ತದೆ ಎಂದು ಬೋಸರಾಜು ಹೇಳಿದ್ದಾರೆ.
Key words: Minister, Bosaraju, major surgery, cabinet, November