ಬೆಂಗಳೂರು,ಅಕ್ಟೋಬರ್, 8,2025 (www.justkannada.in): ಜಾಲಿವುಡ್ ಸ್ಟುಡಿಯೋಗೆ ಬೀಗ, ಬಿಗ್ ಬಾಸ್ ಬಂದ್ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡವಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋ ಬಂದ್ ಹಿಂದೆ ಡಿಕೆ ಶಿವಕುಮಾರ್ ಕೈವಾಡ ಕುರಿತು ಜೆಡಿಎಸ್ ಆರೋಪಿಸಿತ್ತು. ಈ ಕುರಿತು ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ, ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟ್ ಟೀಕೆಗೂ ಇದಕ್ಕೂ ಸಂಬಂಧವಿಲ್ಲ. ಡಿಕೆ ಶಿವಕುಮಾರ್ ಹೇಳಿದ ಮಾತಿಗೆ ತಳುಕು ಹಾಕುವುದು ಸರಿಯಲ್ಲ . ಜಾಲಿವುಡ್ ಸ್ಟುಡಿಯೋ ಬಂದ್ ಹಿಂದೆ ಡಿಸಿಎಂ ಡಿಕೆಶಿ ಹಸ್ತಕ್ಷೇಪವಿಲ್ಲ ಎಂದರು.
ಸ್ಟುಡಿಯೋದವರು ಹೈಕೋರ್ಟ್ ಗೆ ಅರ್ಜಿ ಸಲ್ಲಿದ್ದಾರೆ ಹೈಕೋರ್ಟ್ ತೀರ್ಪು ಬಂದ ಮೇಲೆ ತೀರ್ಮಾನ ಮಾಡಲಾಗುತ್ತದೆ. ಹೈಕೋರಟ್ ಅನುಮತಿ ಪಡೆದು ಸ್ಟುಡಿಯೋ ನಡೆಸಲಿ ಎಂದರು.
ಸ್ಟುಡಿಯೋ ಗೆ ನೀಡಿದ್ದ ನೋಟಿಸ್ ಗೂ ಬಿಗ್ ಬಾಸ್ ಗೂ ಸಂಬಂಧವಿಲ್ಲ ಸ್ಟುಡಿಯೋ ಮಾಲೀಕರು ಕ್ಲಿಯರೆನ್ಸ್ ತೆಗೆದುಕೊಳ್ಳಬೇಕಿತ್ತು. ನೋಟಿಸ್ ಗೆ ಕ್ಯಾರೆ ಎನ್ನದ ಹಿನ್ನೆಲೆ ಬಂದ್ ಮಾಡಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
Key words: DCM, DK Shivakumar, Jollywood studio, Minister, Ishwar Khandre