ಬೆಂಗಳೂರು,ಅಕ್ಟೋಬರ್,7,2025 (www.justkannada.in): ಸಚಿವ ಸಂಪುಟ ಪುನಾರಚನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ವಾಲ್ಮೀಕಿ ಜಯಂತಿಯಲ್ಲಿ ಮಾತನಾಡುವ ವೇಳೆ ಈ ಕುರಿತು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಸಂಪುಟ ಪುನರ್ ರಚನೆ ಆಗುತ್ತೆ . ಆಗ ವಾಲ್ಮೀಕಿ ಸಮುದಾಯದವರಿಗೆ ಸ್ಥಾನ ನೀಡುವ ಬಗ್ಗೆ ನೋಡೋಣ ಎಂದಿದ್ದಾರೆ. ಕೆ.ಎನ್ ರಾಜಣ್ಣ ಬಿ.ನಾಗೇಂದ್ರದರಿಂದ ತೆರವಾದ ಸ್ಥಾನ ತುಂಬುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಜಾತಿ ಸಮೀಕ್ಷೆ ಅವಧಿ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಇಂದು ಸಮೀಕ್ಷೆಗೆ ಡೆಡ್ ಲೈನ್ ಇರುವುದರಿಂದ ಸಭೆ ಕರೆದಿರುವೆ. ಸಮೀಕ್ಷೆ ಅವಧಿ ವಿಸ್ತರಣೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.
Key words: CM, Siddaramaiah, hints ,cabinet restructure