ಬೆಂಗಳೂರು,ಅಕ್ಟೋಬರ್,4,2025 (www.justkannada.in): ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ 10.3 ಲಕ್ಷ ರೂ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
ಫಿರೋಜ್ ಅನ್ಸಾರಿ(37) ಬಂಧಿತ ಆರೋಪಿ. ಈತ ಬಿಹಾರ ಮೂಲದ ಹಾಲಿ ಸರ್ಜಾಪುರ ನ ತೆಂದಲೂರು ನಿವಾಸಿಯಾಗಿದ್ದಾನೆ. ಅಬಕಾರಿ ಜಂಟಿ ಆಯುಕ್ತ ಫಿರೋಜ್ ಖಾನ್ ಕಿಲ್ಲೆದಾರ್ & ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ರವರ ಮಾರ್ಗದರ್ಶನ ದಲ್ಲಿ ಅಬಕಾರಿ ಡಿವೈಎಸ್ ಪಿ ಅಬೂಬಕ್ಕರ್ ಮುಜಾವಾರ್ ಉಪ ವಿಭಾಗ 07ರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಬೆಂಗಳೂರು ನಗರದ ರೈಲು ನಿಲ್ದಾಣ ಸಮೀಪದ ಸಿಗ್ನಲ್ & ಟೆಲಿಕಮ್ಯುನಿಕೇಶನ್ ಸೆಂಟರ್ ಹತ್ತಿರ ದಾಳಿ ಮಾಡಿ ಅಬಕಾರಿ ಇಲಾಖೆ ಅಧಿಕಾರಿಗಳು ಫಿರೋಜ್ ಅನ್ಸಾರಿಯನ್ನ ಬಂಧಿಸಿದ್ದು ಅಕ್ರಮವಾಗಿ ಮಾರಾಟಕ್ಕಾಗಿ ಬೆಂಗಳೂರು ನಗರಕ್ಕೆ ಸಾಗಿಸುತ್ತಿದ್ದ ಅಂದಾಜು 10.3 ಲಕ್ಷ ರೂಪಾಯಿ ಮೌಲ್ಯದ ಒಟ್ಟು 11.480 ಕೆ.ಜಿ ಒಣಗಿದ ಗಾಂಜಾ ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ದ NDPS ಕಾಯ್ದೆ 1985 ರಡಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ…
ದಾಳಿಯಲ್ಲಿ ಇನ್ಸ್ ಪೆಕ್ಟರ್ ಸಂತೋಷ್ ಆರ್ ಪಿ ಎಫ್ ಇನ್ಸ್ ಪೆಕ್ಟರ್ ಜಾವೇದ್ ಮೊಕಶಿ ಮತ್ತು ಸಿಬ್ಬಂದಿ ಜಯರಾಮ್, ದೇವರಾಜ್. ಬಸವರಾಜ್ ಸಿಂತ್ರಿ ಮುಂತಾದವರು ಪಾಲ್ಗೊಂಡಿದ್ದರು.
Key words: Ganja, worth Rs 10.3 lakh, seized, Accused, arrested