ನೆರೆಯಿಂದ ಬೆಳೆ ಹಾನಿ:  ನಾನೇ ಕಲ್ಬುರ್ಗಿಗೆ ಹೋಗಿ ವಾಸ್ತವಾಂಶ ತಿಳಿಯುತ್ತೇನೆ- ಮಾಜಿ ಪ್ರಧಾನಿ ಹೆಚ್ ಡಿಡಿ

ಬೆಂಗಳೂರು,ಅಕ್ಟೋಬರ್,3,2025 (www.justkannada.in):  ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಯಿಂದ ಬೆಳೆ ಹಾನಿ ಹಿನ್ನೆಲೆಯಲ್ಲಿ ನಾನೇ ಕಲ್ಬುರ್ಗಿಗೆ ಹೋಗಿ ವಾಸ್ತವಾಂಶ ತಿಳಿಯುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಮಳೆಯಿಂದ ಬೆಳೆಹಾನಿಯಾಗಿದ್ದು ಗೊತ್ತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತ ಕೆಲಸ ಮಾಡಬೇಕು ಸ್ಥಳಕ್ಕೆ ಹೋಗಿ ಸಮಸ್ಯೆ ಆಲಿಸಿ ಸ್ಪಂದಿಸುವ ಕೆಲಸ ಮಾಡಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಭಾವಿಸುತ್ತೇನೆ 48 ಗಂಟೆಯೊಳಗೆ ಜಿಲ್ಲಾ ಉಸ್ತುವಾರಿ ಸಚಿವರು ಏನ್ ಮಾಡಿದ್ದಾರೆ ಪರಿಹಾರ ಕೊಟ್ಟಿದ್ದಾರೆಯೇ  ಎಲ್ಲವನ್ನೂ ತಿಳಿದು ಮಾತನಾಡಬೇಕು ಮೂರ್ನಾಲ್ಕು ದಿನದ ಬಳಿಕ ನಾನೇ ಕಲಬುರಗಿಗೆ ಹೋಗುತ್ತೇನೆ  ಹೋಗಿ ನಾನೇ ವಾಸ್ತವಂಶ ತಿಳಿಯುತ್ತೇನೆ. ಸರ್ಕಾರ ಏನು ಮಾಡಿದೆ?  ಏನು ಮಾಡಿಲ್ಲ ಅ ಮೇಲೆ ಹೇಳುತ್ತೇನೆ ಎಂದರು.

ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ.  ಮೈತ್ರಿ ಬಗ್ಗೆ ಯಾವುದೇ ಆತಂಕವಿಲ್ಲ.  ಸ್ಥಳೀಯ ಸಂಸ್ಥೆ ಚುನಾವಣ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಆತಂಕವಿಲ್ಲ. ಪ್ರಧಾನಿ ಮೋದಿ ನನ್ನ ನಡುವೆ ಸಂಬಂಧ ಚೆನ್ನಾಗಿದೆ.  ನಮ್ಮ ಸಂಬಂಧ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ನಮ್ಮದು 10 ವರ್ಷದಿಂದ ಇರುವ ಸಂಬಂಧ ಎಂದು ಹೆಚ್ .ಡಿ ದೇವೇಗೌಡರು ನುಡಿದರು.

Key words: floods, Kalburgi, Former PM, HDD