ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’ ಹೈಕಮಾಂಡ್

ಮೈಸೂರು,ಸೆಪ್ಟಂಬರ್,3,2025 (www.justkannada.in):  ನಿನ್ನೆ ಮೈಸೂರು ದಸರಾ ಕಾರ್ಯಕ್ರಮದ ಸಿಎಂ, ಸಚಿವರ  ಪರೇಡ್ ವೇಳೆ ಬಾಲಕನೋರ್ವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಬಾಲಕನ ಬಗ್ಗೆ   ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ನಿನ್ನೆ ದಸರಾ ಕಾರ್ಯಕ್ರಮದಲ್ಲಿ ತೆರದ ವಾಹನದಲ್ಲಿ ಸಿಎಂ, ಡಿಸಿಎಂ ಸಚಿವರು ಪರೇಡ್ ನಡೆಸಿದ್ದರು.  ಈ ವೇಳೆ ನಾಯಕರ ಮಧ್ಯೆ ಕಪ್ಪು ಕನ್ನಡಕ ಹಾಕಿದ್ದ ಬಾಲಕ ಕಾಣಿಸಿಕೊಂಡಿದ್ದನು. ಈ ಬಾಲಕ ಸಚಿವ ಹೆಚ್ ಸಿ ಮಹದೇವಪ್ಪಅವರ ಮೊಮ್ಮಗ  ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದಸರಾ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾಣಿಕ ಹುದ್ದೆಯಲ್ಲಿ ಇಲ್ಲದವರ ಭಾಗಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು,  ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ?  ಬಾಗಿಯಾಗಿದ್ದವರ ಬಗ್ಗೆ ಮಾಹಿತಿ  ನೀಡುವಂತೆ ಸೂಚಿಸಿದೆ ಎಂಬ ಮಾಹಿತಿ  ಲಭ್ಯವಾಗಿದೆ.

Key words: Mysore Dasara, parade, boy , congress, high command