ಜಾತಿಗಳ ನಡುವೆ ಬೆಂಕಿ ಹಚ್ಚಿದ್ದು ಬಿಎಸ್ ಯಡಿಯೂರಪ್ಪ- ಸಚಿವ ಮಧು ಬಂಗಾರಪ್ಪ ವಾಗ್ದಾಳಿ

ಶಿವಮೊಗ್ಗ,ಅಕ್ಟೋಬರ್,3,2025 (www.justkannada.in):  ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಬಿವೈ ವಿಜಯೇಂದ್ರ ಬಚ್ಚ. ಸಿಎಂ ಸಿದ್ದರಾಮಯ್ಯ ಜಾತಿ ನಡುವೆ ಒಡಕು ಮೂಡಿಸುತ್ತಿಲ್ಲ. ಜಾತಿಗಳ ನಡುವೆ ಬೆಂಕಿ ಹಚ್ಚಿದ್ದು ಬಿಎಸ್ ಯಡಿಯೂರಪ್ಪ. ಜಾತಿಗಣತಿ ಬಗ್ಗೆ ಬಿಎಸ್ ವೈ,  ದೇವೇಗೌಡರು ಮಾತನಾಡುತ್ತಿಲ್ಲ. ಆದರೆ ಬಿವೈ ವಿಜಯೇಂದ್ರ ಮಾತನಾಡುತ್ತಿದ್ದಾರೆ ಅವರೊಬ್ಬ ಬಚ್ಚ ಎಂದು ಕಿಡಿಕಾರಿದರು.

ಜಾತಿಗಣತಿ ಸಮೀಕ್ಷೆ ಯಶಸ್ವಿಯಾಗಲಿದೆ. ಪ್ರಣಾಳಿಕೆಯಲ್ಲಿ ಜಾತಿಗಣತಿ ಮಾಡುವುದಾಗಿ ಉಲ್ಲೇಖ ಮಾಡಿದ್ದವು.  ಈಗ ಶೇ. 56 ರಷ್ಟು ಜಾತಿಗಣತಿ ಆಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words: BS Yediyurappa, fire,between, castes, Minister, Madhu Bangarappa