ಮೈಸೂರು, ಅಕ್ಟೋಬರ್,2,2025 (www.justkannada.in): ಈ ಬಾರಿ 10ದಿನದ ಬದಲು 11 ದಿನ ಮೈಸೂರು ದಸರಾ ಆಚರಣೆ ಮಾಡಿದ್ದೇವೆ. ಯಾವುದೇ ಅಡೆತಡೆಯಿಲ್ಲದೆ ದಸರಾ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ಶುಭ ಧನುರ್ ಲಗ್ನದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ 10 ದಿನದ ಬದಲು 11 ದಿನ ದಸರಾ ಆಚರಣೆ ಮಾಡಲಾಗುತ್ತಿದೆ. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನ ತಿಳಿಸುತ್ತೇನೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹಲವೆಡೆ ಅತಿವೃಷ್ಠಿ ಆಗಿ ಬೆಳೆ ಹಾನಿಯಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಿದ್ದೇವೆ ಎಂದರು.
ಮೈಸೂರಿಗೆ ಈ ಬಾರಿ ಅತಿಹೆಚ್ಚು ಪ್ರವಾಸಿಗರು ಬಂದಿದ್ದಾರೆ. ದಸರಾ ವೀಕ್ಷಣೆಗೆ ಅತಿಹೆಚ್ಚು ಪ್ರವಾಸಿಗರು ಬಂದಿದ್ದಾರೆ ಈಗ ನಂದಿ ಧ್ವಜ ಪೂಜೆ ನೆರವೇರಿಸಿದ್ದೇನೆ. ಎಲ್ಲಾ ಪ್ರವಾಸಿಗರಿಗೆ ಹೃತ್ಪೂರ್ವಕ ಸ್ವಾಗತ. ಇದು ಜನರ ಹಬ್ಬ ಜನರು ಖುಷಿಯಿಂದ ಇದ್ದರೆ ನಮಗೆ ಖುಷಿ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
Key words: Mysore Dasara, tourists, arrived , CM Siddaramaiah