ಕಾಲ್ತುಳಿತ ದುರಂತ:  ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ವಿಜಯ್

ಚೆನ್ನೈ,ಸೆಪ್ಟಂಬರ್,30,2025 (www.justkannada.in) :  ತಮಿಳುನಾಡಿನ ಕರೂರಿನಲ್ಲಿ ರಾಜಕೀಯ ರ್ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ ಘಟನೆಗೆ  ಸಂಬಂಧಿಸಿದಂತೆ ತಮಿಳಿಗ ವೆಟ್ರಿ ಪಕ್ಷದ ಸಂಸ್ಥಾಪಕ, ನಟ ವಿಜಯ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಮಿಳುನಾಡಿನ ಕರೂರಿನಲ್ಲಿ  ನಟ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವನ್ನಪ್ಪಿದ್ದರು. ಈ ಘಟನೆ ಬಗ್ಗೆ  ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ವಿಜಯ್, ನನ್ನನ್ನು ನೋಡಿ ಅಭಿಮಾನಿಗಳು ರ್ಯಾಲಿಗೆ ಬಂದಿದ್ದರು. ಆದರೆ ಕಾಲ್ತುಳಿತ ಘಟನೆ ನನ್ನ ಜೀವನದಲ್ಲಿ ಇಂತಹ ನೋವಿನ ಸ್ಥಿತಿ ಎಂದೂ ನೋಡಿರಲಿಲ್ಲ. ಕಾಲ್ತುಳಿತ ದುರಂತದಿಂದ ಮನಸ್ಸಿಗೆ ತುಂಬಾ ನೋವಾಗಿದೆ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ನನ್ನ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳೇ ನಾನು ನಿಮ್ಮಲ್ಲಿ ಒಂದು ವಿನಂತಿ ಮಾಡುತ್ತೇನೆ. ನೀವು ನನ್ನ ವಿರುದ್ದ ಯಾವುದೇ ಕ್ರಮ ಕೈಗೊಳ್ಳಬಹುದು. ಆದರೆ ಕಾರ್ಯಕರ್ತರ ಮೇಲೆ ಅಲ್ಲ. ಘಟನೆ ಬಗ್ಗೆ ಎಲ್ಲಾ ಸತ್ಯಗಳು ಶೀಘ್ರದಲ್ಲಿ ಹೊರಬರಲಿದೆ ಎಂದು ನಟ ವಿಜಯ್ ತಿಳಿಸಿದ್ದಾರೆ.

Key words: Stampede, Actor Vijay, responded, first time