ಬೆಂಗಳೂರು,ಸೆಪ್ಟಂಬರ್,30,2025 (www.justkannada.in): ಜಾತಿ ಗಣತಿ ಬಗ್ಗೆ ಗೊಂದಲ ಹೇಳಿಕೆಗಳನ್ನ ನೀಡಬೇಡಿ ಎಂದು ಬಿಜೆಪಿ ನಾಯಕರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಈ ಸಮೀಕ್ಷೆ ಮೂಲಕ ಸಮುದಾಯಗಳ ಸ್ಥಿತಿಗತಿ ಗೊತ್ತಾಗುತ್ತೆ ಸಮೀಕ್ಷೆಯಿದ ಇನ್ನೇನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯ? ಕೇಂದ್ರ ಸರ್ಕಾರವೂ ಜಾತಿಗಣತಿ ಮಾಡುತ್ತದೆ. ಆಗ ಗಣತಿಯಲ್ಲಿ ಭಾಗವಹಿಸಲ್ಲ ಅಂದ್ರೆ ಗೊಂದಲ ಆಗಲ್ವಾ? ರಾಜ್ಯ ಬಿಜೆಪಿ ನಾಯಕರು ಇದನ್ನ ಅರ್ಥ ಮಾಡಿಕೊಳ್ಳಬೇಕು ನಿಗದಿತ ಸಮಯದೊಳಗೆ ಸಮೀಕ್ಷೆ ಮುಗಿಸುತ್ತೇವೆ ತುಮಕೂರು ಜಿಲ್ಲೆಯಲ್ಲೂ ಸಮೀಕ್ಷೆ ವೇಗ ಪಡೆದಿದೆ ಎಂದು ಪರಮೇಶ್ವರ್ ತಿಳಿಸಿದರು.
ನಿಗಮ ಮಂಡಳಿಗಳಿಗೆ ನಾವು ಪಟ್ಟಿ ತಯಾರಿಸಿ ಕೊಟ್ಟಿದ್ದವು. ಸಿಎಂ ಡಿಸಿಎಂ ಚರ್ಚಿಸಿ ಕೆಲವು ಬದಲಾವಣೆ ಮಾಡಿದ್ದಾರೆ. ಹೈಕಮಾಂಡ್ ಗಮನಕ್ಕೆ ತಂದು ಬದಲಾವಣೆ ಮಾಡಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದಾಗಲೂ ಬದಲಾವಣೆ ಮಾಡಿದ್ದವು. ಬಿಎಂಟಿಸಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಕೇಳಲ್ಪಟ್ಟೆ ಎಂದು ಪರಮೇಶ್ವರ್ ತಿಳಿಸಿದರು.
Key words: confusing, statements, caste census, BJP, Minister, Parameshwar