ಮೈಸೂರು,ಸೆಪ್ಟಂಬರ್,29,2025 (www.justkannada.in): ಅಪ್ರಾಪ್ತ ಬಾಲಕಿ ಪೂರೈಕೆ ಜಾಲ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಸಂಪರ್ಕಕ್ಕೆ ಮಹಿಳೆಯೊಬ್ಬಳು 20 ಲಕ್ಷ ರೂ.ಬೇಡಿಕೆ ಇಟ್ಟ ಪ್ರಕರಣ ಬಯಲಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಒಡನಾಡಿ ಪರಶು, ಸ್ಟಾನ್ಲಿ, ಅಪ್ರಾಪ್ತ ಬಾಲಕಿ ಜೊತೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷ ಡಿಮ್ಯಾಂಡ್ ಇಟ್ಟಿದ್ದರು. ಋತುಮತಿಯಾದ ಅಪ್ರಾಪ್ತ ಬಾಲಕಿಯನ್ನು ಟಾರ್ಗೆಟ್ ಮಾಡಿದ್ದರು. ಈ ಸಂಬಂಧ ನಮಗೆ ಮಾಹಿತಿ ದೊರೆಯಿತು. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಓರ್ವ ಮಹಿಳೆಯನ್ನು ಓರ್ವ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ನಿವಾಸಿ ಶೋಭಾ ಈ ದಂಧೆಗೆ ಮುಂದಾಗಿದ್ದಳು. ಆಕೆಯ ಜೊತೆಗೆ ತುಳಸಿಕುಮಾರ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಇದು ಒಡನಾಡಿ ಸೇವಾ ಸಂಸ್ಥೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯಾಗಿದೆ. ಬಾಲಕಿಯನ್ನು ವೇಶ್ಯಾವಾಟಿಕೆಗೆ ಇಳಿಸುವ ಪ್ರಯತ್ನ ನಡೆದಿತ್ತು. ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ನಡೆಸಿದ್ರೆ ಮಾನಸಿಕ ಕಾಯಿಲೆಗಳು ಲೈಂಗಿಕ ಕಾಯಿಲೆಗಳು ದೂರ ಆಗತ್ತೆ ಎಂಬ ಮೂಢನಂಬಿಕೆ ಇದೆ. ಇದನ್ನೇ ಬಳಸಿಕೊಂಡು ಬಾಲಕಿಯನ್ನು ಬಳಸಿ ದುಡ್ಡು ಮಾಡಲು ಮುಂದಾಗಿದ್ದಾರೆ. ಇದು ಬೇರೆ ಬೇರೆ ದೇಶಗಳಲ್ಲಿ ನಡೆಯತ್ತೆ. ನಮ್ಮಲ್ಲಿ ಇಂತಹ ಪ್ರಕರಣ ಕೇಳಿದ್ದವು ಅಷ್ಟೇ .
20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ನಂತರ ಬಾಲಕಿಯನ್ನು ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಾರೆ. ಈಗ ನಾವೇ ಕಣ್ಣಾರೆ ಕಂಡು ಬಾಲಕಿಯನ್ನು ರಕ್ಷಣೆ ಮಾಡಿದ್ದೇವೆ. ಇದರ ಹಿಂದೆ ದೊಡ್ಡ ಜಾಲ ಇದೆ ಅನ್ನಿಸುತ್ತೆ. ಜಾಲತಾಣಗಳ ಮೂಲಕ ಇವೆಲ್ಲವೂ ಆಗುತ್ತಿದೆ. ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಒಡನಾಡಿ ಸ್ಟಾನ್ಲಿ ಹಾಗೂ ಪರಶು ತಿಳಿಸಿದ್ದಾರೆ.
Key words: girl, supply, network, Rs. 20 lakhs demanded, Mysore