ಮೈಸೂರು, ಸೆ.೨೫,೨೦೨೫: ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಗಳ ಜತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ವಿರುದ್ಧ ಅರಣ್ಯ ಇಲಾಖೆ ಚಾಟಿ ಬೀಸಿದೆ. ಇಂಥವರ ವಿರುದ್ಧ ದಂಡ ಪ್ರಯೋಗಿಸಿದೆ.
ಸೆ. 18ರಂದು ಯುವತಿಯೊಬ್ಬಳು ರೀಲ್ಸ್ ಮಾಡಿದ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟಗೊಂಡು, ಪೊಲೀಸ್, ಅರಣ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಕರಾದ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಜತೆ ಫೋಟೋ, ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಜರುಗಿಸಿದೆ. ಪ್ರಜ್ವಲ್ , ಎಂ.ಡಿ.ರಾಘವೇಂದ್ರ ತಲಾ ೫೦೦ ರೂ. ಹಾಗೂ ಕೆ.ನವೀನ್ ೨೦೦೦ ರೂ. ಮತ್ತು ಕು.ಕೃತಿ ೧೦೦೦ ರೂ. ದಂಡ ಪಾವತಿಸಿದ್ದಾರೆ.
ಏನಿದು ಘಟನೆ:
ಈ ಹಿಂದೆಯೇ ದಸರಾ ಆನೆಗಳ ಜತೆ ಸಾರ್ವಜನಿಕರು ಫೋಟೋ, ವಿಡಿಯೋ ಹಾಗೂ ರೀಲ್ಸ್ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸರಕಾರ ಇದರ ವಿಯಂತ್ರಣಕ್ಕೆ ಅದೇಶಿಸಿತ್ತು. ಈ ಬಗ್ಗ ಸ್ಪಷ್ಟ ಸೂಚನೆ ನೀಡಿದ್ದರು ಮತ್ತೆ ಅಂಥ ಘಟನೆ ಪುನರಾವರ್ತನೆ ಆಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತು. ಕೆಲ ದಿನಗಳ ಹಿಂದೆಯಷ್ಟೆ ಕರ್ತವ್ಯಲೋಪವೆಸಗಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಿತ್ತು.
ಸೆ.18ರ ರಾತ್ರಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಆನೆ ಸಮೀಪ ಹೋಗಿ ರೀಲ್ಸ್ ಮಾಡಿದ ಯುವತಿ ವರ್ತನೆಗೆ ಸಿಬ್ಬಂದಿ ಮತ್ತು ಆನೆಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳ ಕರ್ತವ್ಯ ಲೋಪ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಜತೆಗೆ ಮಹಿಳೆಯನ್ನು ಪತ್ತೆ ಮಾಡಿ ದಂಡ ವಿಧಿಸಿ, ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಲು ಸೂಚಿಸಿತ್ತು.
ಪ್ರಭಾವ ಬೀರಿದ ಪತ್ರಕರ್ತ..!
ಯುವತಿ ಆನೆ ಜತೆ ರೀಲ್ಸ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆ ಅರಮನೆಗೆ ಪ್ರವೇಶಿಸಲು ನೆರವಾದವರು ಯಾರು ಎಂಬುದನ್ನು ಬೆನ್ನತ್ತಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಪತ್ರಕರ್ತನೊಬ್ಬನ ಪ್ರಭಾವದಿಂದಲೇ ಆಕೆ ರಾತ್ರಿ ವೇಳೆ ಅರಮನೆ ಪ್ರವೇಶಿಸಿ ರೀಲ್ಸ್ ಮಾಡಿದ್ದು ಎಂಬ ಅಂಶ ತಿಳಿದು ಬಂದಿದೆ ಎನ್ನಲಾಗಿದೆ.
key words: Reels with Dasara Gajapade, Forest Department, imposes “fine”, on culprits
SUMMARY:
Reels with Dasara Gajapade: Forest Department imposes “fine” on culprits
The Forest Department has cracked down on those who take photos, videos and reels with elephants participating in Dasara. Fines have been imposed on such people.
On September 18, a video of a young woman taking a reel went viral. The news about this was published in the media, and there was widespread criticism of the negligence of the police and the Forest Department.
In this context, the Forest Department officials who took action have taken action against those who took photos and reels with elephants. Prajwal, M.D. Raghavendra have paid a fine of Rs. 500 each and K. Naveen Rs. 2000 and Ku. Kriti Rs. 1000.