ಮಂಡ್ಯ,ಸೆಪ್ಟಂಬರ್,26,2025 (www.justkannada.in): ರಾಜ್ಯ ಸರ್ಕಾರ ಕೆಆರ್ ಎಸ್ ನಲ್ಲಿ ನಡೆಸುತ್ತಿರುವ ಕಾವೇರಿ ಆರತಿಯನ್ನ ವಿರೋಧಿಸಿ ಇಂದು ರೈತ ಸಂಘಟನೆಗಳು, ರೈತಮುಖಂಡರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ನ ಪ್ರವಾಸಿ ಮಂದಿರ ಬಳಿ ರೈತಮುಖಂಡರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರೈತರ ವಿರೋಧ ನಡುವೆಯೂ ಕಾವೇರಿ ಆರತಿ ಮಾಡುತ್ತಿರುವುದಕ್ಕೆ ಕಿಡಿಕಾರಿದರು. ಪ್ರತಿಭಟನೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪಾಲ್ಗೊಂಡಿದ್ದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ರೈತಮುಖಂಡರು ಚರ್ಚೆ ನಡೆಸಿದರು. ಕೆಆರ್ ಎಸ್ ನ ಬೃಂದಾವನ ಗಾರ್ಡನ್ ನಲ್ಲಿ ಇಂದಿನಿಂದ 5 ದಿನಗಳ ಕಾಲ ಕಾವೇರಿ ಆರತಿ ಹಮ್ಮಿಕೊಳ್ಳಲಾಗಿದೆ.
Key words: Protest, outrage, farmer, organizations, against, Kaveri Aarati, KRS