ಬೆಂಗಳೂರು,ಸೆಪ್ಟಂಬರ್, 24,2025 (www.justkannada.in): ನಾಡಿನ ಹಿರಿಯ ಸಾಹಿತಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್ ಭೈರಪ್ಪ(94) ಅವರು ಹೃದಯಾಘಾತದಿಂದ ನಿಧನರಾಗಿದ್ದು ಈ ಕುರಿತು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಕಾದಂಬರಿಕಾರ, ತತ್ವಜ್ಞಾನಿ, ಪದ್ಮಶ್ರೀ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್ ಎಲ್ ಬೈರಪ್ಪ ಅವರು ಇಂದು ಮಧ್ಯಾಹ್ನ 2:38 ಕ್ಕೆ ಹೃದಯ ಸ್ತಂಭನಕ್ಕೆ ಒಳಗಾಗಿ ನಿಧನರಾಗಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆ ಪ್ರಕಟಣೆ ಮೂಲಕ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಸಾಹಿತಿ ಎಸ್ ಎಲ್ ಭೈರಪ್ಪಅವರಿಗೆ ಇಬ್ಬರು ಪುತ್ರರಿದ್ದು ಒಬ್ಬ ಪುತ್ರ ಈಗಾಗಲೇ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ಇನ್ನೊಬ್ಬ ಪುತ್ರ ಲಂಡನ್ ನಲ್ಲಿದ್ದು ನಾಳೆ ಆಗಮಿಸಲಿದ್ದಾರೆ.
Key words: writer, novelist, S.L. Bhyrappa, passes away, heart attack