ಈ ವರ್ಷ ಹೊಸದಾಗಿ 2 ಸಾವಿರ ಬಸ್ ಖರೀದಿ- ಸಚಿವ ರಾಮಲಿಂಗರೆಡ್ಡಿ

ಚಿಕ್ಕಮಗಳೂರು,ಸೆಪ್ಟಂಬರ್,24,2025 (www.justkannada.in): ಈ ವರ್ಷ  ಕೆಎಸ್ ಆರ್ ಟಿಸಿಯಿಂದ ಹೊಸದಾಗಿ 2 ಸಾವಿರ ಬಸ್ ಖರೀದಿ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಇಂದು ಕಡೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬಿಜೆಪಿ ಅಧಿಕಾರದಲ್ಲಿದ್ದಾಗ 4 ವರ್ಷಗಳ ಕಾಲ 1 ಬಸ್ ಸಹ ಖರೀದಿಸಿಲ್ಲ.  ಮೂರು ಕಾರ್ಪೋರೇಟ್ ಗಳಲ್ಳೂ 4 ವರ್ಷ ಒಂದು ಬಸ್ ಖರೀದಿಸಿಲ್ಲ. ಕೇವಲ ಬಿಎಂಟಿಸಿಯಲ್ಲಿ 450ಬಸ್ ಮಾತ್ರ ಖರೀದಿಸಿದ್ದರು. ಆದರೆ ನಾವು ಈಗ ಎಲ್ಲವನ್ನು ಸರಿಪಡಿಸುತ್ತಿದ್ದೇವೆ .

ಈ ವರ್ಷ ಹೊಸದಾಗಿ ನಾವು 2 ಸಾವಿರ ಬಸ್ ಖರೀದಿ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

Key words: 2,000, new buses, purchase, Minister, Ramalingareddy