ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜುಗೆ ಸಂಕಷ್ಟ

ಬೆಂಗಳೂರು,ಸೆಪ್ಟಂಬರ್,24,2025 (www.justkannada.in): ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜುಗೆ ಸಂಕಷ್ಟ ಎದುರಾಗಿದೆ.

ಬಿಕ್ಲುಶಿವ ಕೊಲೆ ಪ್ರಕರಣ ಸಂಬಂಧ ಶಾಸಕ ಭೈರತಿ ಬಸವರಾಜು ಬಂಧನದ ಅಗತ್ಯವಿದೆ ಬಂಧನದಿಂದ ರಕ್ಷಣೆ ನೀಡಿದ್ದ ಆದೇಶ ತೆರವುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದ್ದು ವಿಚಾರಣೆ ನಡೆಯುತ್ತಿದೆ.

ವಿಚಾರಣೆ ಭೈರತಿ ಬಸವರಾಜು ಸುಳ್ಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣಧಲ್ಲಿ ಹಲವು ಸಾಕ್ಷ್ಯಗಳನ್ನ ಸಂಗ್ರಹಿಸಲಾಗಿದೆ. ಈಗ ಭೈರತಿ ಬಸವರಾಜು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ ಎಂದು ಪ್ರಾಸಿಕ್ಯೂಷನ್ ಪರ  ಎಸ್ ಪಿಪಿ ಜಗದೀಶ್ ವಾದ ಮಂಡಿಸಿದ್ದಾರೆ.

ಭೈರತಿ ಬಸವರಾಜ್ ಪರ ವಕೀಲರು ವಾದ ಮಂಡಿಸಿ ಸಿಐಡಿ ಪೊಲೀಸರು ಕಳೆದ ಒಂದು ತಿಂಗಳಿಂದ ವಿಚಾರಣೆಗೆ ಕರೆದಿಲ್ಲ. ವಿಚಾರಣೆಗೆ ಕರೆದಾಗಲೆಲ್ಲಾ ಹಾಜರಾಗಿದ್ದಾರೆ. ಈಗ ಬಂಧನದ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವುದಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದಿಸಿದರು.

Key words: Biklu Shiva, Murder case, MLA, Bhairathi Basavaraju