ಧರ್ಮಸ್ಥಳ ಕೇಸ್: ಮಹೇಶ್ ತಿಮರೋಡಿ ಗಡಿಪಾರು

ದಕ್ಷಿಣ ಕನ್ನಡ,ಸೆಪ್ಟಂಬರ್,23,2025 (www.justkannada.in):  ಧರ್ಮಸ್ಥಳ ಪ್ರಕರಣ ಸಂಬಂಧ  ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಹೋರಾಟಗಾರ ಮಹೇಶ್ ತಿಮರೋಡಿ ಅವರನ್ನ ದಕ್ಷಿಣ ಕನ್ನಡದಿಂದ ಗಡಿಪಾರು ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಮಹೇಶ್ ತಿಮರೋಡಿಯನ್ನ ಗಡಿಪಾರು ಮಾಡಿ ಪುತ್ತೂರು AC ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ. ಒಂದು ವರ್ಷದವರೆಗೆ ಗಡಿಪಾರು  ಮಾಡಲಾಗಿದೆ.

ಸದ್ಯ ಬೆಳ್ತಂಗಡಿಯಲ್ಲಿಯೇ  ತಿಮರೋಡಿ ಇದ್ದಾರೆಂದು ಮಾಹಿತಿ ಇದೆ. ಮಹೇಶ್ ತಿಮರೋಡಿ ವಿರುದ್ದ 32 ಕೇಸ್ ಗಳಿವೆ. ಬುರುಡೆ ಪ್ರಕರಣ, ಶವ ಹೂತಿಟ್ಟ ಪ್ರಕರಣದ ಆರೋಪಿ ಚಿನ್ನಯ್ಯಗೆ ಮಹೇಶ್ ತಿಮರೋಡಿ ಆಶ್ರಯ ನೀಡಿದ್ದರು.

Key words: Dharmasthala case,  Mahesh Timarodi, deported