ಬೆಂಗಳೂರು, ಸೆ.೨೩,೨೦೨೫ : ಪ್ರಮುಖ ಪರೀಕ್ಷಾ ಸುಧಾರಣೆಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಶ್ನೆ ಪತ್ರಿಕೆಗಳನ್ನು ರೂಪಿಸಲು ಕೃತಕ ಬುದ್ಧಿಮತ್ತೆ (AI) ಬಳಸಲು ನಿರ್ಧರಿಸಿದೆ.
ಮೊದಲಿಗೆ ವಿಶ್ವವಿದ್ಯಾನಿಲಯ ಎಂಬಿಎ ವಿಭಾಗದಲ್ಲಿ ಇದನ್ನು ಪೈಲೆಟ್ ಯೋಜನೆಯಾಗಿ ಜಾರಿಗೆ ತರಲಿದೆ. ಪ್ರಶ್ನೆ ಪತ್ರಿಕೆಗಳ ಪ್ರಾಯೋಗಿಕ ಪರೀಕ್ಷೆ ನಡೆಸಲು ಯೋಜಿಸಿದೆ. ಬಳಿಕ ಕ್ರಮೇಣ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೂ AI ಬಳಕೆ ವಿಸ್ತರಿಸಲು ಯೋಜಿಸಿದೆ. ಈ ಹಿಂದೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ಇದೇ ರೀತಿಯ ಯೋಜನೆ ಜಾರಿಗೆ ಮುಂದಾಗಿತ್ತು. ಆದರೆ ಆನಂತರ ತಾಂತ್ರಿಕ ಸವಾಲುಗಳ ಕಾರಣದಿಂದ ಯೋಜನೆ ಕೈಬಿಟ್ಟಿತು.
ಇದೀಗ ಬೆಳಗಾವಿಯ ವಿಟಿಯು ತಾಂತ್ರಿಕ ವಿಶ್ವವಿದ್ಯಾನಿಲಯ ಕೃತಕ ಬುದ್ದಿಮತ್ತೆ ಬಳಕೆಗೆ ಮುಂದಾಗಿದೆ. ಈ ಸಂಬಂದ “ಜಸ್ಟ್ ಕನ್ನಡ” ಜತೆ ಮಾತನಾಡಿದ ಕುಲಪತಿ ಪೊ.ವಿದ್ಯಾಶಂಕರ್ ಹೇಳಿದಿಷ್ಟು..
VTU ಅನುಸರಿಸುತ್ತಿರುವ ಪ್ರಸ್ತುತ ವ್ಯವಸ್ಥೆಯ ಪ್ರಕಾರ, ವಿಷಯ ತಜ್ಞರ ತಂಡವು ಎಂಜಿನಿಯರಿಂಗ್ ಮತ್ತು ಎಂಬಿಎ ಸೇರಿದಂತೆ ಎಲ್ಲಾ ತಾಂತ್ರಿಕ ಕೋರ್ಸ್‌ಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುತ್ತದೆ.
“ನಮ್ಮ ಶಿಕ್ಷಕರು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕೆಲಸವನ್ನು AI ಮಾಡಲು ಸಾಧ್ಯವಾದರೆ, ಅದನ್ನು ಏಕೆ ಬಳಸಬಾರದು? AI ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೆಲವು ಕಂಪನಿಗಳಿಂದ ನಮಗೆ ಪ್ರಸ್ತಾವನೆಗಳು ಬಂದಿವೆ. ಆದಾಗ್ಯೂ, ನಾವು ಇನ್ನೂ ಕಂಪನಿಯ ಬಗ್ಗೆ ನಿರ್ಧರಿಸಿಲ್ಲ” ಎಂದರು.
ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಹೋಲಿಸಿದರೆ ಎಂಬಿಎ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಆದ್ದರಿಂದ ಪ್ರಾಯೋಗಿಕವಾಗಿ ಮೊದಲಿಗೆ ಎಂಬಿಎಯೊಂದಿಗೆ ಪ್ರಾರಂಭಿಸಲು ನಿರ್ಧರಿಸಿದ್ದೇವೆ. “ಮೊದಲ ಕೆಲವು ಪ್ರಯತ್ನಗಳಲ್ಲಿ AI ಮೂಲಕ ಪ್ರಶ್ನೆ ಪತ್ರಿಕೆ ತಯಾರಿಸಿ ಬಳಿಕ ಅದನ್ನು ವಿವಿಯ ವಿಷಯ ತಜ್ಞರು ಪರಿಶೀಲಿಸುತ್ತಾರೆ.
ಇದರ ಜತೆಗೆ ಪರೀಕ್ಷಾ ಮೌಲ್ಯಮಾಪನಕ್ಕಾಗಿ AI ಅನ್ನು ಕಾರ್ಯಗತಗೊಳಿಸಲು ವಿಶ್ವವಿದ್ಯಾಲಯವು ಆಸಕ್ತಿ ಹೊಂದಿದೆ. “ಪ್ರತಿ ಸೆಮಿಸ್ಟರ್‌ನಲ್ಲಿ ನಾವು ಕೆಲ ಅಧ್ಯಾಪಕರಿಂದ ಅನಿಯಮಿತ ಮೌಲ್ಯಮಾಪನ ನೋಡುತ್ತೇವೆ. ನಮ್ಮ ಪರೀಕ್ಷೆ ಮತ್ತು ಮೌಲ್ಯಮಾಪನ ನಿಯಮಗಳ ಪ್ರಕಾರ, ಮೊದಲ ಮತ್ತು ಎರಡನೇ ಮೌಲ್ಯಮಾಪನಗಳ ನಡುವಿನ ಅಂಕಗಳಲ್ಲಿನ ವ್ಯತ್ಯಾಸವು 15 ಕ್ಕಿಂತ ಕಡಿಮೆಯಿದ್ದರೆ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ AI ಬಳಸಿ ಎರಡನೇ ಮೌಲ್ಯಮಾಪನ ಮಾಡಿಸುವುದು ನಮ್ಮ ಆಲೋಚನೆ ಎಂದು ಕುಲಪತಿ ವಿದ್ಯಾಶಂಕರ್ ಹೇಳಿದರು.
ಇದೇ ವೇಳೆ ಪ್ರಶ್ನೆ ಪತ್ರಿಕೆಗಳ ಗುಣಮಟ್ಟ ಸುಧಾರಿಸುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದ ಕುಲಪತಿ, “ಸರಿಯಾದ ಆಜ್ಞೆಯನ್ನು ನೀಡಿದರೆ, AI ಉತ್ತಮ ಗುಣಮಟ್ಟದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತದೆ. AI ಯುಗದಲ್ಲಿ, ತಾಂತ್ರಿಕ ವಿಶ್ವವಿದ್ಯಾಲಯವಾಗಿರುವುದರಿಂದ, ನಾವು ಈ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕಾಗಿದೆ. ಕಂಪನಿಗಳು ನಾವು ನಿಯೋಜಿಸಿರುವ ಕಾರ್ಯದ ಕುರಿತು ವರದಿ ಸಲ್ಲಿಸಲು ವಿವಿ ಕಾಯುತ್ತಿದೆ ಎಂದರು.
key words: VTU, artificial intelligence (AI), design question papers, Vice Chancellor Prof. Vidyashankar.
SUMMARY:
VTU to use artificial intelligence (AI) to design question papers: Vice Chancellor Prof. Vidyashankar.
In a major exam reform, Visvesvaraya Technological University (VTU) in Belgaum has decided to use artificial intelligence (AI) to design question papers. Initially, the university will implement it as a pilot project in the MBA department. It plans to conduct practical testing of question papers. Later, it plans to gradually expand the use of AI to evaluate answer sheets.
Earlier, Rajiv Gandhi University of Health Sciences (RGUHS) had tried a similar project. But later the project was abandoned due to technical challenges. Now, VTU in Belgaum has decided to use artificial intelligence. Speaking to “Just Kannada”, Vice Chancellor P. Vidyashankar said this.