ಮೈಸೂರು,ಸೆಪ್ಟಂಬರ್,23,2025 (www.justkannada.in): ಜಾತಿ ಗಣತಿಯಲ್ಲಿ ಯಾವುದೇ ಗೊಂದಲ. ಸಮಸ್ಯೆಗಳಿಲ್ಲ. ಆದರೆ ಬಿಜೆಪಿಯವರು ವಿನಃ ಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ 2025 ಅಂಗವಾಗಿ ಕಲಾಮಂದಿರದಲ್ಲಿ ಆಯೋಜಿಸಿರುವ ಮಕ್ಕಳ ದಸರಾವನ್ನು ದೀಪ ಬೆಳಗುವ ಮೂಲಕ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಇದೇ ವೇಳೆ ಎಂ.ಎಲ್ .ಸಿ ಎನ್ ಮಂಜೇಗೌಡ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ಬಳಕ ಮಾತನಾಡಿದ ಸಚಿವ ಮಧು ಬಂಗಾರಪ್ಪ, ನಾವು ಮಾಡುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ. ಜನ ಯಾವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಕೊಳ್ಳಬೇಕಲ್ವಾ. ಅದಕ್ಕಾಗಿ ಈ ಸಮೀಕ್ಷೆ ನಡೆಯುತ್ತಿದೆ. ನಿನ್ನೆಯಿಂದಷ್ಟೇ ಆರಂಭವಾಗಿದೆ. ಎಲ್ಲಿಯೂ ಏನು ಸಮಸ್ಯೆ ಉಂಟಾಗಿಲ್ಲ. ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಯೂ ಚೆನ್ನಾಗಿ ನಡೆಯುತ್ತಿದೆ. ಬಿಜೆಪಿಯವರು ವಿನಃ ಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ ಎಂದರು.
ಕೇಂದ್ರದಿಂದ ಜಿಎಸ್ ಟಿ ಪರಿಷ್ಕರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಕೇಂದ್ರ ಸರ್ಕಾರ ಈಗ ಎಲ್ಲರಿಗೂ ಜಿಎಸ್ ಟಿ ಲಡ್ಡು ತಿನ್ನಿಸುತ್ತಿದೆ. ಜಿಎಸ್ಟಿ ಹೊಸ ನೀತಿಯಿಂದ ದೊಡ್ಡ ಬದಲಾವಣೆ ಆಗುತ್ತಿಲ್ಲ. ಜಿಎಸ್ ಟಿ ಹೊರೆ ಕಮ್ಮಿ ವಿಚಾರವನ್ನು ನೋಡುವುದಾದರೆ ರಾಜ್ಯದ ಮಟ್ಟಿಗೆ ತಲಾ 57 ರೂ ಅಷ್ಟೇ. ಆದರೆ ಸಿದ್ದರಾಮಯ್ಯ ನವರು ಪ್ರತಿ ತಿಂಗಳು 2 ಸಾವಿರ ಕೊಡುತ್ತಿದ್ದಾರೆ. 200 ಯುನಿಟ್ ವಿದ್ಯುತ್ ನೀಡಿ ಮನೆ ಬೆಳಗುತ್ತಿದ್ದಾರೆ. ಜಿಎಸ್ ಟಿ ಪಾಲು ರಾಜ್ಯಕ್ಕೆಷ್ಟು ಕಡಿಮೆ ಸಿಗುತ್ತಿದದೆ ಎಂದು ಚಿಂತನೆ ಮಾಡಬೇಕು. ಇದರ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತದೆ ಇರುವುದು ಬೇಸರ ತಂದಿದೆ. GST ಲಡ್ಡು ಕೇವಲ ಬಿಜೆಪಿಗರಿಗಷ್ಟೇ ಸಿಹಿಯಾಗಿದೆ, ಆದರೆ ರಾಜ್ಯದ ಜನರಿಗೆ ಕಹಿಯಾಗಿದೆ ಎಂದರು.
Key words: no confusion, caste census, Minister, Madhu Bangarappa, Mysore