ಸೀಟು ಪಡೆದು ಅಡ್ಮಿಷನ್ ಆಗದ 351 ಅಭ್ಯರ್ಥಿಗಳಿಗೆ KEA ಶೋಕಾಸ್ ನೋಟಿಸ್: ವಿಟಿಯುಗೆ ಪತ್ರ

ಬೆಂಗಳೂರು,ಸೆಪ್ಟಂಬರ್,23,2025 (www.justkannada.in): ಪ್ರತೀ ವರ್ಷ ಕೂಡ ಸಿಇಟಿ ಸೀಟು ಹಂಚಿಕೆ ಬಳಿಕ ಕೇಳಿ ಬರುತ್ತಿದ್ದ  ಸೀಟ್ ಬ್ಲಾಕಿಂಗ್ ಕರಾಳ ದಂಧೆಯಿಂದ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುವ ಕನಸು ಕನಸಾಗೆ ಉಳಿಯುತ್ತಿತ್ತು. ಅದೇ ರೀತಿ ಈ ವರ್ಷವೂ ಸೀಟ್ ಬ್ಲಾಕಿಂಗ್ ಯತ್ನ ನಡೆದ್ದು ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಸೀಟು ಪಡೆದು ಕಾಲೇಜಿಗೆ ದಾಖಲಾಗದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

ಹೌದು, ವಿವಿಧ ವೃತ್ತಿಪರ ಕೋರ್ಸ್ ಗೆ ಸೀಟು ಪಡೆದು 351 ಅಭ್ಯರ್ಥಿಗಳು ಸಂಬಂಧಪಟ್ಟ ಕಾಲೇಜಿಗೆ ಹೋಗಿ ಅಡ್ಮಿಷನ್ ಮಾಡಿಕೊಂಡಿಲ್ಲ. ಇಂತಹ  351 ವಿದ್ಯಾರ್ಥಿಗಳಿಗೆ ಕೆಇಎ ಶೋಕಾಸ್ ನೋಟೀಸ್ ನೀಡಿರುವ ಕೆಇಎ ಈ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅಡ್ಮಿಷನ್ ಕೊಡದಂತೆ ವಿಟಿಯುಗೆ ಪತ್ರ ಬರೆದು ಸೂಚನೆ ನೀಡಿದೆ.

ಒಟ್ಟು 351 ಅಭ್ಯರ್ಥಿಗಳು ಸೀಟು ಪಡೆದು ಸಿಇಟಿ ಮೂರನೇ ಸುತ್ತಿನ ಸೀಟು ಹಂಚಿಕೆ ಬಳಿಕವೂ ಕಾಲೇಜು ಅಡ್ಮಿಷನ್ ಮಾಡಿಸಿ ಕೊಂಡಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಕಾರಣ ಕೇಳಿ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಸಂಪೂರ್ಣ ವಿವರ ವಿಟಿಯ ಗೆ ಸಲ್ಲಿಕೆ ಮಾಡಿ ಯಾವುದೇ ಮಾರ್ಗದಿಂದಲೂ ಅಡ್ಮಿಷನ್ ಕೊಡದಂತೆ ಸೂಚಿಸಿದ್ದಾರೆ. ಕಾಮೆಡ್ ಕೆ ಅಥವಾ ಮ್ಯಾನೇಜ್ಮೆಂಟ್ ಸೀಟು ಕೂಡ ಸದ್ಯದ ಮಟ್ಟಿಗೆ ಈ 351 ಅಭ್ಯರ್ಥಿಗಳಿಗೆ ಕೊಡಬಾರದು ಎಂದು ತಿಳಿಸಿದ್ದಾರೆ.

351 ಅಭ್ಯರ್ಥಿಗಳ ಪೈಕಿ ಕೆಲವರು ವೈಯಕ್ತಿಕ ಕಾರಣಗಳಿಂದ ಅಡ್ಮಿಷನ್ ಆಗದೇ ಇರುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಅಭ್ಯರ್ಥಿಗಳು ಅಡ್ಮಿಷನ್ ಆಗದ ಸೀಟು ಖಾಸಗಿ ಅವರಿಗೆ ಲಾಭ ಮಾಡಿ ಕೊಳ್ಳಲು ದಾರಿ ಆಗುತ್ತದೆ. ಈ ಹಿನ್ನಲೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ .

Key words: KEA, shows cause, notice, 351 students, VTU