ಮೈಸೂರು, ಸೆಪ್ಟಂಬರ್, 20,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘಕ್ಕೆ ಆರ್ಥಿಕ ಚೈತನ್ಯ ತುಂಬಲು ಪಿಗ್ಮಿ ಸಂಗ್ರಹ, ಈ – ಸ್ಟಾಂಪಿಂಗ್ ಸೌಲಭ್ಯ ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆರಂಭಿಸಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಇಂದು ನಡೆದ 9ನೇ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಮಾತನಾಡಿದ ಅಧ್ಯಕ್ಷ ಕೆ.ದೀಪಕ್ ಈ ನಿರ್ಣಯ ಪ್ರಕಟಿಸಿದರು.
ಕಳೆದ 8 ವರ್ಷದ ಹಿಂದೆ ಆರಂಭಗೊಂಡ ಸಹಕಾರ ಸಂಘವು ಅನೇಕ ಸವಾಲುಗಳನ್ನು ದಾಟಿ ಸುಮಾರು 150ಕ್ಕೂ ಹೆಚ್ಚು ಪತ್ರಕರ್ತರಿಗೆ ಸುಮಾರು 50 ಲಕ್ಷ ರೂ.ಗಳ ವರೆಗೆ ಸಾಲಸೌಲಭ್ಯ ನೀಡಿಲಾಗಿದೆ. 60ಕ್ಕೂ ಹೆಚ್ಚು ಪತ್ರಕರ್ತರನ್ನು ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಒಳಪಡಿಸಲಾಗಿದೆ. ಆರ್.ಡಿ ಸಂಗ್ರಹದಲ್ಲಿ ನೂರಕ್ಕೆ ನೂರರಷ್ಟು ಆರ್ಥಿಕ ಶಿಸ್ತು ಪಾಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪಿಗ್ಮಿ ಸಂಗ್ರಹ ಜಾರಿ ಸಂಬಂಧ ಸಾಧಕ ಬಾಧಕ ಪರಿಶೀಲಿಸಲು ಸಮಿತಿ ರಚನೆ ಮಾಡಲಾಗುವುದು. ಹಾಗೂ ಸಾಲ ವಸೂಲಾತಿಗೆ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಹನಗೋಡು ನಟರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಸಹಕಾರ ಸಂಘದ ನಿರ್ದೇಶಕರಾದ ಪ್ರಗತಿ ಗೋಪಾಲಕೃಷ್ಣ, ಹೆಚ್.ಎಸ್. ದಿನೇಶ್ ಕುಮಾರ್, ಜಯಶಂಕರ್ ಮೂರ್ತಿ, ಹುಲ್ಲಹಳ್ಳಿ ಮೋಹನ್, ಸಾಲಿಗ್ರಾಮ ಯಶವಂತ್ , ಮುಕುಂದ, ಎನ್. ಸುರೇಶ್, ಮಹೇಶ್ .ಎಂ. ದಾಸೇಗೌಡ, ನಾಗೇಂದ್ರಕುಮಾರ್, ಬೀಚನಹಳ್ಳಿ ಮಂಜುನಾಥ್, ಬಿ.ರಾಘವೇಂದ್ರ ಹಾಜರಿದ್ದರು.
Key words: Economic, Cooperative Society, Mysore, Journalists, Deepak