ಬೆಂಗಳೂರು, ಸೆ.೨೦,೨೦೨೫: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಅಂಬಾರಿ ಆನೆಯಾಗಿರುವ ಕ್ಯಾ. ಅಭಿಮನ್ಯುವಿಗೆ ದಸರಾ ಮುಗಿಯುತ್ತಿದ್ದಂತೆ ಗೋವಾದಲ್ಲಿ ಹೊಸ ಟಾಸ್ಕ್ ಸಿದ್ಧವಾಗಿದೆ.?
ಎಲಿಫ್ಯಾಂಟ್ ಕೂಂಬಿಂಗ್ ಅಪರೇಷನ್ ನಲ್ಲಿ ಪಂಟರ್ ಆಗಿರುವ ಅಭಿಮನ್ಯುವಿನ ಸಾಮರ್ಥ್ಯ ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾಗೆ ಫೇಮಸ್. ಆದ್ದರಿಂದ ಈಗ ನೆರೆ ರಾಜ್ಯ ಗೋವಾದಿಂದ ಸಹಾಯಕ್ಕೆ ಮನವಿ ಬಂದಿದೆ.
ಇಂದು ವಿಕಾಸಸೌಧದಲ್ಲಿ ಗೋವಾ ಅರಣ್ಯ ಸಚಿವರು (@visrane) ಹಾಗೂ ಅವರ ನಿಯೋಗ ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರಖಂಡ್ರೆ ಅವರನ್ನು ಭೇಟಿಮಾಡಿತ್ತು. ಕಾರಣ, ಗೋವಾದಲ್ಲಿ ಕೃಷಿಗೆ ಹಾನಿ ಮಾಡುತ್ತಿರುವ “ಓಂಕಾರ” ಎಂಬ ಪುಂಡಾನೆ ಸೆರೆ ಹಿಡಿಯಲು ಕರ್ನಾಟಕದ ಸಹಕಾರ ಕೋರಿ.
ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ಪರಿಣತಿಯನ್ನು ಹೊಂದಿದ್ದು, ಕರುನಾಡಿನ ಗಜಪಡೆಗಳ ಪರಾಕ್ರಮ ತಿಳಿದಿದ್ದ ಗೋವಾ ಸಚಿವರು, ಕರ್ನಾಟಕದ ಸಹಾಯಯಾಚಿಸಿದ್ದರು.
ಈ ವೇಳೆ ಸಚಿವ ಈಶ್ವರ ಖಂಡ್ರೆ, ದಸರಾ ಬಳಿಕ ರಾಜ್ಯದ ತಜ್ಞರು ಮತ್ತು ತಂಡ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ಭರವಸೆ ನೀಡಿದರು. ಆದರೆ ಕುಮ್ಕಿ ಆನೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತು ಕೂಂಬಿಂಗ್ ಎಕ್ಸ್ ಪರ್ಟ್ ಅಭಿಮನ್ಯು ಅಂಡ್ ಟೀಂ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿದೆ. ನಾಡಹಬ್ಬದ ಬಳಿಕ ಅಭಿಮನ್ಯು ಅಂಡ್ ಟೀಂ ಗೋವಾಗೆ ತೆರಳುವ ಕುತೂಹಲ ಮೂಡಿದೆ.
key words: A new task, Abhimanyu, elephant of Dasara, Mysore, nadahabba, Goa
SUMMARY:
A new task for Abhimanyu, the elephant of Dasara.
Abhimanyu, who is a punter in the Elephant Combing Operation, is famous not only in Karnataka but also in the whole of India. Therefore, now there has been a request for help from the neighboring state of Goa. Today, Goa Forest Minister (@visrane) and his delegation met State Forest Minister Eshwar Khandre at Vikas Soudha. The reason is to seek Karnataka’s cooperation in catching a hooligan named “Omkara” who is damaging agriculture in Goa.