ಬೆಂಗಳೂರು,ಸೆಪ್ಟಂಬರ್,19,2025 (www.justkannada.in): ಜಾತಿ ಗಣತಿ ವಿಚಾರವಾಗಿ ನಮ್ಮಲ್ಲಿ ಯಾವ ಗೊಂದಲ, ಅಸಮಾಧಾನವಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ನಿನ್ನೆ ನಡೆದ ಸಭೆಯಲ್ಲಿ ಯಾವ ಗೊಂದಲವೂ ಆಗಿಲ್ಲ. ಕಾಂತರಾಜು ವರದಿ ತಿರಸ್ಕಾರ ಮಾಡಲು ಆಗಲ್ಲ ನಮ್ಮ ಮುಂದೆ ಕಾಂತರಾಜ ವರದಿ ಕೂಡ ಇದೆ. ಇವತ್ತು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನಿಗದಿತ ಸಮಯದಲ್ಲಿಯೇ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಎಲ್ಲ ಸಮುದಾಯದಲ್ಲೂ ಬಡವರು ಇದ್ದಾರೆ. ಯಾರು ಬಡವರು ಎಂದು ತಿಳಿಯಬೇಕು ಹೀಗಾಗಿ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
Key words: Caste Census, no confusion, Minister, Santosh Lad