ಮತಗಳ್ಳತನ: ರಾಹುಲ್ ಗಾಂಧಿ ಆರೋಪ ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ನವದೆಹಲಿ,ಸೆಪ್ಟಂಬರ್,18,2025 (www.justkannada.in):  ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ ನಾಯಕ ಮಾಡಿರುವ ಆರೋಪವನ್ನ ಕೇಂದ್ರ ಚುನಾವಣಾ ಆಯೋಗ ತಳ್ಳಿ ಹಾಕಿದೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಕರ್ನಾಟಕದ ಅಳಂದದಲ್ಲಿ ಮತಗಳ್ಳತನ ನಡೆದಿದ್ದು ಸುಮಾರು 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನ ಡಿಲೀಟ್  ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈ ಆರೋಪ ಕೇಳಿ ಬಂದ ಬೆನ್ನಲ್ಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್,  ಆನ್ ಲೈನ್ ನಲ್ಲಿ ಯಾವುದೇ ಮತವನ್ನ ಅಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಆರೋಪಗಳು ಆಧಾರ ರಹಿತ. ಪೂರ್ವಾಗ್ರಹ ಪೀಡಿತರಾಗಿ ಆರೋಪ ಮಾಡುವುದು ಸರಿಯಲ್ಲ. ಅರ್ಹ ವ್ಯಕ್ತಿಗೆ ತಮ್ಮ ಅಭಿಪ್ರಾಯವನ್ನ ತಿಳಿಸಲು ಅವಕಾಶ ನೀಡದೆ ಯಾವುದೇ ಮತದಾರರನ್ನ ಪಟ್ಟಿಯಿಂದ ತೆಗೆದು ಹಾಕಲು ಸಾಧ್ಯವಿಲ್ಲ ದಾಖಲೆಗಳನ್ನ ಸೂಕ್ತವಾಗಿ ಪರಿಶೀಲಿಸಿ ಮಾತನಾಡಲಿ ಎಂದು ತಿಳಿಸಿದರು.

ಅಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಆರೋಪ ಸರಿಯಲ್ಲ ಕರ್ನಾಟಕದ ಅಳಂದ ಕ್ಷೇತ್ರದಲ್ಲಿ ಯಾವುದೇ ಮತಗಳವು ನಡೆದಿಲ್ಲ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷವೇ ಗೆದ್ದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Key words: Election Commission, Rahul Gandhi, allegations, vote rigging