ಜಾತಿಗಣತಿ ವಿಚಾರದಲ್ಲಿ ಬಿಜೆಪಿಗೆ ಗೊಂದಲ್ಲ, ಜನರಿಗಲ್ಲ- ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು,ಸೆಪ್ಟಂಬರ್,18,2025 (www.justkannada.in):  ಜಾತಿ ಗಣತಿ ವಿಚಾರದಲ್ಲಿ ಜನರಿಗೆ ಯಾವುದೇ ಗೊಂದಲವಿಲ್ಲ.ಆದರೆ ಬಿಜೆಪಿ ನಾಯಕರು ಗೊಂದಲದಲ್ಲಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಜಾತಿ ಗಣತಿ ವರದಿ ಸರ್ಕಾರಕ್ಕೆ ಸಿಕ್ಕಾಗ ಜನಪರ ಕೆಲಸ ಆಗುತ್ತದೆ.   ದಲಿತರಿಗೆ ಯತ್ನಾಳ್ ಎಷ್ಟು ಗೌರವ ಕೊಡುತ್ತಾರೆ ಎಂದು ಗೊತ್ತಿದೆ  ದಲಿತರ ಬಗ್ಗೆ ಮಾತನಾಡುವ ಯೋಗ್ಯತೆ ಯತ್ನಾಳ್  ಬಿಜೆಪಿಗೆ ಇಲ್ಲ ಎಂದರು.

ಅಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಕುರಿತು ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ,  ಬಿಜೆಪಿ ಕಳ್ಳಮತಗಳಿಂದ ಗೆದ್ದಿದ್ದಾರೆ . ಸಾಕ್ಷಿಸಮೇತ ರಾಹುಲ್ ಗಾಂಧಿ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು, ಪ್ರಧಾನಿ ಮೋದಿ, ಅಮಿತ್ ಶಾ ಯಾಕೆ ಸುಮ್ಮನಿದ್ದಾರೆ  ಎಂದು ಕಿಡಿಕಾರಿದರು.

Key words: BJP, confused, caste census, Minister, Shivraj Thangadgi