ಮೈಸೂರು,ಸೆಪ್ಟಂಬರ್,17,2025 (www.justkannada.in): ಮುಡಾ ಅಕ್ರಮ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧನ ಸ್ವಾಗತಿಸಿದ ಶಾಸಕ ಶ್ರೀವತ್ಸ, ಇನ್ನು ಅನೇಕರ ಬಂಧನ ಆಗಬೇಕು. ಈ ಹಿಂದಿನ ಅಧ್ಯಕ್ಷರು, ಆಯುಕ್ತರು, ಅಧಿಕಾರಿಗಳ ಬಂಧನ ಆಗಬೇಕು ಎಂದು ಆಗ್ರಹಿಸಿದರು.
ಈ ಕುರಿತು ಇಂದು ಮಾತನಾಡಿದ ಶಾಸಕ ಶ್ರೀವತ್ಸ, ನಾನು ಈ ಹಿಂದೆಯೇ ಹೇಳಿದ್ದೆ. ಮುಡಾದಲ್ಲಿ ಅಕ್ರಮ ಆಗಿರೋದು ನಿಜ. ಸಾವಿರಾರು ಅಕ್ರಮವಾಗಿ ಸೈಟುಗಳನ್ನು ಹಂಚಿದ್ದಾರೆ. ಕೇವಲ ದಿನೇಶ್ ಕುಮಾರ್ ಬಂಧನ ಆದರೆ ಸಾಲಲ್ಲ.ಇನ್ನು ಅನೇಕರ ವಿರುದ್ಧ ತನಿಖೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯುತ್ತಿರುತ್ತದೆ ಎಂದರು.
ಈಗಾಗಲೇ ದರ್ಗವಿದ್ರೂ ಇನ್ನೊಂದು ದರ್ಗಾಕ್ಕೆ ಯಾಕೆ ನೋಟಿಫಿಕೇಶನ್ ಕೊಟ್ಟಿದ್ದಾರೆ?
ಕೆ.ಆರ್ ಮೊಹಲ್ಲಾದ ಗಾಡಿ ಚೌಕ ದರ್ಗಾ ವಿವಾದ ವಿಚಾರ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ಅಲ್ಲಿ ಈಗಾಗಲೇ ದರ್ಗಾವಿದೆ. ಇನ್ನೊಂದು ದರ್ಗಾಕ್ಕೆ ಆಯುಕ್ತರು ಯಾಕೆ ನೋಟಿಫಿಕೇಶನ್ ಕೊಟ್ಟಿದ್ದಾರೆ? ಇರುವ ದರ್ಗಾದ ಬಗ್ಗೆ ನಾವು ಪ್ರಶ್ನೆ ಮಾಡಲ್ಲ. ಅದು ಅಕ್ರಮ ಸಕ್ರಮ ಅದನ್ನು ಈಗ ಚರ್ಚೆ ಮಾಡಲ್ಲ. ದರ್ಗಾ ಇದ್ದರೂ ಕೂಡ ಇನ್ನೊಂದು ದರ್ಗಾ ಯಾಕೆ ಅನ್ನೋದು ನಮ್ಮ ಪ್ರಶ್ನೆ. ಅಲ್ಲಿ ಆಟೋಗಳು ನಿಲ್ಲಿಸುತ್ತಾರೆ ಬೆಂಕಿ ಹಚ್ಚಿ ನಮ್ಮ ಮೇಲೆ ಹಾಕಿದ್ರೆ ಯಾರು ಹೊಣೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಮಿಷನರ್ ಗೆ ದೂರು ಕೊಡುತ್ತೇನೆ. ಈ ಕೂಡಲೇ ಅಲ್ಲಿ ಇರುವಂತ ಎಲ್ಲವನ್ನೂ ಖಾಲಿ ಮಾಡಿಸಬೇಕು. ಒಂದು ಧಾರ್ಮಿಕ ಕೇಂದ್ರವಿದೆ ಅದನ್ನು ಬಿಟ್ಟು ಮಿಕ್ಕ ಏನು ಕೂಡ ಅಲ್ಲಿರೋದು ಬೇಡ. ದರ್ಗಾ ಇರುವ ಯಾವ ಮ್ಯಾಪ್ ನಲ್ಲಿ ಉಲ್ಲೇಖ ಇಲ್ಲ. ಏನಾದ್ರೂ ಇದ್ದರೆ ದಾಖಲೆಗಳನ್ನು ಕೊಡಲಿ ಎಂದು ಶಾಸಕ ಶ್ರೀವತ್ಸ ಹೇಳಿದರು.
Key words: Former MUDA Commissioner, Dinesh Kumar, arrest, MLA, Srivatsa