ಮುಡಾ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ತನಿಖೆ ಆಗಲಿ- ಸಂಸದ ಯದುವೀರ್

ಮೈಸೂರು,ಸೆಪ್ಟಂಬರ್,17,2025 (www.justkannada.in): ಮುಡಾ ಅಕ್ರಮದಲ್ಲಿ ಯಾರ್ ಯಾರು ಭಾಗಿಯಾಗಿದ್ದಾರೆ ಎಲ್ಲರ ಮೇಲೂ ತನಿಖೆ ಆಗಲಿ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಮುಡಾ ಹಗರಣ ವಿಚಾರದಲ್ಲಿ ಮಾಜಿ ಆಯುಕ್ತ ದಿನೇಶ್ ಬಂಧನ ವಿಚಾರ ಕುರಿತು ಮಾತನಾಡಿದ ಸಂಸದ ಯದುವೀರ್,  ಮುಡಾದಲ್ಲಿ ಅಕ್ರಮ ಆಗಿದೆ. ಹೀಗಾಗಿ ತನಿಖೆ ನಡೆಯುತ್ತಿದೆ. ನಾವು ಹಿಂದೇನೆ ಹೇಳಿದ್ದವು. ಸಮಗ್ರ ತನಿಖೆ ಆಗಬೇಕು ಎಂದು ಹೇಳಿದ್ದವು.  ಈಗ ದಿನೇಶ್ ಕುಮಾರ್ ಬಂಧನ ಮಾಡಿದ್ದಾರೆ ಮುಡಾ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಮೋದಿ ಅವರ ಹುಟ್ಟುಹಬ್ಬ ಹಿನ್ನಲೆ ಒಳಿತಾಗಲಿ ಅಂತ ಹೋಮ,ಹವನ, ಪೂಜೆ ಹಮ್ಮಿಕೊಂಡಿದ್ದೆವು. ಅವರಿಗೆ ಒಳಿತಾಗಲಿ, ಲೋಕಕ್ಕೆ ಒಳಿತಾಗಲಿ ಅಂತ ಪ್ರಾರ್ಥನೆ ಮಾಡಿದ್ದೇವೆ ಎಂದು ಯದುವೀರ್ ತಿಳಿಸಿದರು.

ಧರ್ಮಸ್ಥಳ ಬುರುಡೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಎಸ್.ಐ.ಟಿ ತನಿಖೆ ಸ್ವಾಗತ ಮಾಡಿದ್ದೇವೆ. ತನಿಖೆಯಿಂದ ಈಗಾಗಲೇ ಸತ್ಯ ಏನು ಎಲ್ಲರಿಗೂ ಗೊತ್ತಾಗಿದೆ. ಇನ್ನು ಏನು ಬೇಕಾದರೂ ತನಿಖೆ ಮಾಡಲಿ. ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಅಂತ ಜನ ಹೇಳುತ್ತಿದ್ದಾರೆ. ತನಿಖೆಗೆ ನಮ್ಮ ವಿರೋಧ ಇಲ್ಲ. ಆದರೆ ತನಿಖೆ ವರದಿ ಬಿಡುಗಡೆ ಮಾಡಲಿ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

Key words: Muda case, investigate, MP Yaduveer